ಚೀನಾದಲ್ಲಿ ಮತ್ತೆ ಹೆಚ್ಚಾಗುತ್ತಿದೆ ಕರೊನಾ ಸೋಂಕಿತರ ಸಂಖ್ಯೆ, ಶನಿವಾರ ಒಂದೇ ದಿನ 30 ಹೊಸ ಪ್ರಕರಣ ಪತ್ತೆ

CHINA_1
Published on

ಬೀಜಿಂಗ್​: ಕರೊನಾ ವೈರಸ್​ ಸೋಂಕಿನ ಜಾಗತಿಕ ಕೇಂದ್ರ ಬಿಂದು ಚೀನಾದಲ್ಲಿ ಮತ್ತೆ ಕೋವಿಡ್​ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ಹೊಂದೇ ದಿನ 30 ಹೊಸ ಪ್ರಕರಣಗಳು ಪತ್ತೆಯಾಗಿವೆ. ಶುಕ್ರವಾರ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದವು.

ಹೊಸ ಸೋಂಕಿತರಲ್ಲ್ಲಿ ಹೆಚ್ಚಿನವರು ವಿದೇಶದಿಂದ ಬಂದವರು ಮತ್ತು ಸ್ಥಳೀಯ ಮಟ್ಟದಲ್ಲಿನ ಹರಡುವಿಕೆಯಿಂದ ಬಳಲುತ್ತಿರುವವರು ಆಗಿದ್ದಾರೆ ಎನ್ನಲಾಗಿದೆ.

ಭಾನುವಾರ ಈ ಬಗ್ಗೆ ಮಾಹಿತಿ ನೀಡಿರುವ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ, ಪತ್ತೆಯಾಗಿರುವ ಹೊಸ 30 ಪ್ರಕರಣಗಳಲ್ಲಿ 25 ಜನರು ವಿದೇಶದಿಂದ ಬಂದವರು ಎಂದು ಹೇಳಿದೆ. ದಕ್ಷಿಣ ಕರಾವಳಿ ಪ್ರದೇಶ ಗುವಾಂಗ್​ಡಾಂಗ್​ನಲ್ಲಿ ಸ್ಥಳೀಯ ಮಟ್ಟದ ಹರಡುವಿಕೆ ಪ್ರಕರಣಗಳು ಹೆಚ್ಚಾಗಿವೆ ಎಂದು ಮಾಹಿತಿ ನೀಡಿದೆ.

ಶನಿವಾರದ 30 ಪ್ರಕರಣಗಳು ಸೇರಿ ಚೀನಾದಲ್ಲಿ ಇದುವರೆಗೂ 81,669 ಪ್ರಕರಣಗಳು ವರದಿಯಾದಂತಾಗಿದೆ. ಶನಿವಾರು ಮೂರು ಜನ ಮೃತಪಟ್ಟಿದ್ದು, ಸೋಂಕಿನಿಂದ ಸತ್ತವರ ಸಂಖ್ಯೆ 3,329ಕ್ಕೆ ಹೆಚ್ಚಳವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net