

China| ಈಗಾಗಲೇ ತಾಂತ್ರಿಕ ಕ್ಷೇತ್ರದಲ್ಲಿ ಮುನ್ನುಗುತ್ತಿರುವ ಚೀನಾ ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಸಿದ್ಧವಾಗಿದೆ. ಸೆಪ್ಟೆಂಬರ್ 1, 2025 ರಿಂದ ಚೀನಾದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ಪಾಠಗಳನ್ನು ಕಡ್ಡಾಯಗೊಳಿಸಲಿದೆ. ಈ ಪಠ್ಯಕ್ರಮವು ಮಕ್ಕಳಿಗಾಗಿ ಮೋಜಿನ ಮತ್ತು ಸರಳ ಯೋಜನೆಗಳ ಮೂಲಕ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳ ಮೂಲಕ AI ಜ್ಞಾನ ಕಲಿಸಲು ಮುಂದಾಗಿದೆ. ಇದನ್ನು ಅಸ್ತಿತ್ವದಲ್ಲಿರುವ ವಿಷಯಗಳ ಭಾಗವಾಗಿ ಅಥವಾ ಪ್ರತ್ಯೇಕವಾಗಿ ಕಲಿಸಲು ವ್ಯವಸ್ಥೆ ರೂಪಿಸಿಕೊಳ್ಳಲಾಗುತ್ತಿದೆ.
ಈ ಹೊಸ ನೀತಿಯು ಚೀನಾದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಭವಿಷ್ಯದ AI ಕೇಂದ್ರಿತ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಇದರ ಗುರಿಯಾಗಿದೆ.
ಚೀನಾ AI ಕಲಿಕೆಯಲ್ಲಿ ವಿಶ್ವದ ಭವಿಷ್ಯವಾಗಬೇಕೆಂಬ ದೊಡ್ಡ ಗುರಿಯನ್ನೊಂದಿದೆ. ದೈನಂದಿನ ಜೀವನದಲ್ಲಿ AI ನ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂದು ಚೀನಾ ಸ್ಪಷ್ಟವಾಗಿ ತಿಳಿದುಕೊಂಡಿದೆ. ಶಾಲೆಗಳು ಇದಕ್ಕಾಗಿ ಅನುವು ಮಾಡಿಕೊಡಲು ರಾಷ್ಟ್ರೀಯ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಅಮೆರಿಕ ಮತ್ತು ಇಟಲಿಯಂತಹ ದೇಶಗಳು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, AI ಶಿಕ್ಷಣವು ವಿಶ್ವಾದ್ಯಂತ ಹೆಚ್ಚಿನ ಪ್ರಾಮುಖ್ಯತೆಯ ವಿಷಯವಾಗಲಿದೆ.
(ಏಜೆನ್ಸೀಸ್)
ಸೆಪ್ಟೆಂಬರ್ 1, 2025 ರಿಂದ AI ಅಧ್ಯಯನಗಳು ಕಡ್ಡಾಯವಾಗುತ್ತವೆ. ಚಿಕ್ಕ ಮಕ್ಕಳು ವರ್ಷಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಆಟಗಳು ಮತ್ತು ಸರಳ ಯೋಜನೆಗಳ ಮೂಲಕ AI ಅಧ್ಯಯನ ಮಾಡಬೇಕು. ಹಿರಿಯ ವಿದ್ಯಾರ್ಥಿಗಳಿಗೆ ಕೋಡಿಂಗ್ ಮತ್ತು ಐ-ಎಥಿಕ್ಸ್‌ನಂತಹ ಕೋರ್ಸ್‌ಗಳನ್ನು ಹೇಳಿಕೊಡಲಾಗುತ್ತದೆ.