ಜನವರಿ ನಂತರ ಇದೇ ಫಸ್ಟ್​ ಟೈಮ್ ಚೀನಾದಲ್ಲಿ ಸಂಭವಿಸಿಲ್ಲ ಮರಣ​: ಸೆಕೆಂಡ್​ ವೇವ್​ ಜೋರಾಗಿದೆಯಂತೆ!

Corona first victim
Published on

ಬೀಜಿಂಗ್​: ಕರೊನಾ COVID19 ವೈರಸ್ ಸೋಂಕು ಮೊದಲ ಬಾರಿ ಕಾಣಿಸಿಕೊಂಡ ಚೀನಾದಲ್ಲಿ ಜನವರಿ ತಿಂಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ಹೊಸ ಸಾವಿನ ಪ್ರಕರಣ ದಾಖಲಾಗಿಲ್ಲ. ಮಂಗಳವಾರದ ಅಂಕಿ ಅಂಶದಲ್ಲಿ ಇದು ವ್ಯಕ್ತವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಸೆಕೆಂಡ್​ ವೇವ್​ ಜೋರಾಗಿದ್ದು, ವಿದೇಶಗಳಿಂದ ವಾಪಸ್ ಚೀನಾಕ್ಕೆ ಆಗಮಿಸುತ್ತಿರುವವರಲ್ಲಿ ಕರೋನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿದ್ದು 1,000ಕ್ಕೆ ತಲುಪಿದೆ ಇಂಥವರ ಸಂಖ್ಯೆ ಎಂದು ಚೀನಾ ಹೇಳಿಕೊಂಡಿದೆ.

ಚೀನಾದ ನ್ಯಾಷನಲ್​ ಹೆಲ್ತ್ ಕಮಿಷನ್​ ಜನವರಿ ತಿಂಗಳಿಂದ ಕರೊನಾ ಬುಲೆಟಿನ್ ಪ್ರಕಟಿಸುವುದಕ್ಕೆ ಆರಂಭಿಸಿದ್ದು, ಅಲ್ಲಿಂದೀಚೆಗೆ ಇದೇ ಮೊದಲ ಬಾರಿಗೆ ಹೊಸ ಕರೊನಾ ವೈರಸ್ ಸಾವು ಸಂಭವಿಸಿಲ್ಲ. ಜನವರಿಯಿಂದ ಈಚೆಗೆ ಪ್ರತಿನಿತ್ಯವೂ ಸಾವು ಸಂಭವಿಸುತ್ತಿದ್ದು, ಮಂಗಳವಾರ ಇದೇ ಮೊದಲ ಸಲ ಯಾವುದೇ ಸಾವು ಸಂಭವಿಸಿಲ್ಲ ಎಂದು ಅದು ಹೇಳಿದೆ.

ಚೀನಾದ ಮೇನ್​ಲ್ಯಾಂಡ್​ನಲ್ಲಿ ಮಾರ್ಚ್​ ತಿಂಗಳಿಂದ ಕರೊನಾ ಪ್ರಕರಣಗಳು ಕ್ಷೀಣಿಸುತ್ತಿವೆ. ಆದರೆ, ದೇಶದ ಇತರೆ ಭಾಗಗಳಲ್ಲಿ ವಿದೇಶಗಳಿಂದ ಆಗಮಿಸಿದವರ ಮೂಲಕ ಮತ್ತೆ ಸೋಂಕು ಹರಡತೊಡಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಹೆಲ್ತ್ ಕಮಿಷನ್ ಬುಲೆಟಿನ್​ನಲ್ಲಿ ಹೇಳಿಕೊಂಡಿದೆ (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net