ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ

China
Published on

ಚೀನಾ: ಭಾರತದ ವಿರುದ್ಧ ಚೀನಾ ಹೊಸ ತಂತ್ರ ರೂಪಿಸಿದೆ. 'ಹಿಂದಿ' ಭಾಷೆಯನ್ನು ಡಿಕೋಡ್ ಚೀನಾ ಸರ್ಕಾರ ಮಾಡಲು 19 ಭಾಷಾಂತರಕಾರರನ್ನು ನೇಮಕ ಮಾಡಿಕೊಂಡಿದೆ ಎಂದು ಗುಪ್ತಚರ ಮಾಹಿತಿ ದೊರಕಿದೆ.

ಹಿಂದಿ ಭಾಷಾಂತರಕಾರರನ್ನ ನೇಮಿಸಿಕೊಳ್ಳಲು ಚೀನಾ ಯುವ ಪದವೀಧರರನ್ನ ಹುಡುಕಲು ಪ್ರಾರಂಭಿಸಿತ್ತು. ಇದೀಗ ಗಡಿಯಲ್ಲಿರುವ ಭಾರತೀಯ ಸೇನೆಯ ಸಂಭಾಷಣೆಯನ್ನ ಡೀಕೋಡ್ ಮಾಡಲು ಚೀನಾ ನಡೆಸುತ್ತಿರುವ ಕಾರ್ಯಾಚರಣೆಯನ್ನ ಜಾರಿಗೆ ತರಲು ಪ್ರಾರಂಭಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ಚೀನಾ 19 ಮಂದಿಯನ್ನು ಸೇರಿಸಿಕೊಂಡಿದ್ದು, ಅವರು ಹಿಂದಿಯಲ್ಲಿ ಬಲವಾದ ಹಿಡಿತವನ್ನ ಹೊಂದಿದ್ದಾರೆ. ಇವರು ಚೀನಾದ ಗುಪ್ತಚರ ಒಳಹರಿವುಗಳನ್ನ ಸಂಗ್ರಹಿಸುವುದು, ಭಾರತೀಯ ಸೇನಾ ಸಿಬ್ಬಂದಿಯ ಸಂಭಾಷಣೆಗಳ ಪ್ರತಿಲೇಖನಗಳನ್ನ ಮ್ಯಾಂಡರಿನ್ಗೆ ಭಾಷಾಂತರಿಸುವುದು ಮತ್ತು ಬೇಹುಗಾರಿಕೆ ನಡೆಸುವ ಕೆಲವಸನ್ನು ಮಾಡಬೇಕಿದೆ. ಭಾರತೀಯ ಸೇನೆಯ ಸಂವಹನವನ್ನ ಅರ್ಥಮಾಡಿಕೊಳ್ಳಲು ಚೀನಾ ಸೈನಿಕರಿಗೆ ಹಿಂದಿಯನ್ನ ಕಲಿಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net