ಚೀನಾದ ನವೀಕರಿಸಿದ ಹೊಸ ಸ್ಟ್ಯಾಂಡರ್ಡ್ ಮ್ಯಾಪ್​​ನಲ್ಲಿ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಸೇರ್ಪಡೆ..! ಮೊಂಡುತನ ಮುಂದುವರಿಸಿದ ಚೀನಾ

mix map
Published on

ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ಒಳಗೊಂಡಂತೆ ವಿವಾದತ್ಮಕ ಪ್ರದೇಶಗಳನ್ನು ಚೀನಾ ತನ್ನ ನವೀಕರಿಸಿದ ಹೊಸ ಸ್ಟ್ಯಾಂಡರ್ಡ್ ಮ್ಯಾಪ್​​ನಲ್ಲಿ ಉಲ್ಲೇಖಿಸಿದೆ. ಈ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ಮೊಂಡುತನವನ್ನು ಮುಂದುವರಿಸಿದೆ.


ಚೀನಾ ಮತ್ತು ಭಾರತದ ನಡುವೆ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ವಿಚಾರವಾಗಿ ಹಲವು ವರ್ಷಗಳಿಂದ ದೊಡ್ಡ ವಿವಾದವೇ ಇದೆ. ಅರುಣಾಚಲ ಪ್ರದೇಶ, ದಕ್ಷಿಣ ಟಿಬೆಟ್ ನಮ್ಮ ಪ್ರದೇಶ ಎಂದು ಚೀನಾ ಹೇಳಿಕೊಂಡರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿ ಇಂದಿಗೂ ಉಳಿದುಕೊಂಡಿದೆ.


ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ರಾಷ್ಟ್ರೀಯ ಗಡಿಗಳ ರೇಖಾಚಿತ್ರ ವಿಧಾನವನ್ನು ಆಧರಿಸಿ ಈ ನಕ್ಷೆಯನ್ನು ರಚಿಸಲಾಗಿದೆ ಎಂದು ಚೀನಾ ಸರ್ಕಾರಿ ಟ್ವಿಟರ್​​ನಲ್ಲಿ ತಿಳಿಸಲಾಗಿದೆ.


ಅರುಣಾಚಲ ಪ್ರದೇಶ, ದಕ್ಷಿಣ ಟಿಬೆಟ್ ನಮ್ಮ ಪ್ರದೇಶ ಎಂದು ಚೀನಾ ಹೇಳಿಕೊಂಡರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿ ಇಂದಿಗೂ ಉಳಿದುಕೊಂಡಿದೆ.


ತೈವಾನ್​​ನ್ನು ತನ್ನ ಭೂಪ್ರದೇಶದಿಂದ ಬೇರ್ಪಡಿಸಲಾಗದ ಭಾಗವೆಂದು ಚೀನಾ ಹೇಳಿಕೊಂಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೇತೃತ್ವದಲ್ಲಿ ಇದಕ್ಕೆ ಕಾರ್ಯತಂತ್ರವನ್ನು ಕೂಡ ರಚನೆ ಮಾಡಲಾಗಿದೆ. ಈ ವಿಚಾರ ತೈವಾನ್​​ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.


ಹಾಗಾಗಿ ಚೀನಾವು ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಬ್ರೂನಿ ಮತ್ತು ತೈವಾನ್‌ನಂತಹ ದೇಶಗಳ ವಿರೋಧವನ್ನು ಎದುರಿಸುತ್ತಿದೆ. ಚೀನಾ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net