ಇಡೀ ವಿಶ್ವಕ್ಕೆ ಅಪಾಯ ತಂದೊಡ್ಡಿದೆ ಚೀನಾ..: ಅಮೆರಿಕ ಅಧ್ಯಕ್ಷ ಟ್ರಂಪ್​ ಕಿಡಿ

Trumph 27 may 20
Published on

ವಾಷಿಂಗ್ಟನ್​: ಮೊದಲಿನಿಂದಲೂ ಚೀನಾ ವಿರುದ್ಧ ಅಸಮಾಧಾನ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಕೊವಿಡ್​-19 ಶುರುವಾದಾಗಿನಿಂದಲೂ ಚೀನಾವನ್ನು ಮತ್ತಷ್ಟು ಟಾರ್ಗೆಟ್​ ಮಾಡಿದ್ದಾರೆ.

ಕರೊನಾ ವೈರಸ್​ನಿಂದ ಅಮೆರಿಕ ತತ್ತರಿಸಿದೆ. ಇದರಿಂದಾಗಿ ಡೊನಾಲ್ಡ್​ ಟ್ರಂಪ್​ ಅವರು ಪದೇಪದೆ ಚೀನಾ ವಿರುದ್ಧ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ. ಕೊವಿಡ್​-19 ಪ್ರಸರಣದ ಪ್ರಮಾಣ ಹೆಚ್ಚಾದಷ್ಟೂ ನನಗೆ ಚೀನಾದ ಮೇಲಿನ ಸಿಟ್ಟೂ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಅಲ್ಲದೆ ಮೊನ್ನೆಯಷ್ಟೇ ಮಾತನಾಡಿ, ಈ ವೈರಸ್​ ಚೀನಾದ ಪ್ಲೇಗ್​ ಎಂದು ಕರೆದಿದ್ದರು.

ಇಂದು ಮತ್ತೆ ಟ್ವೀಟ್​ ಮೂಲಕ ಚೀನಾದ ಬಗ್ಗೆ ತಮಗಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಮೆರಿಕ ಸೇರಿ ಇಡೀ ವಿಶ್ವಕ್ಕೆ ಇವತ್ತು ಇಷ್ಟೊಂದು ಹಾನಿ, ನಷ್ಟ ಉಂಟಾಗಲು ಚೀನಾವೇ ಕಾರಣ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net