ಚೀನಾದಲ್ಲಿ ಹೊಸ 'ಮಿಸ್ಟರಿ' ವೈರಸ್ ಪತ್ತೆ!; ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ ಏನು? | China Virus

Untitled design - 2025-01-03T155357.203
Published on

ಬೀಜಿಂಗ್​​: ಕರೊನಾ ಮಹಾಮಾರಿ ಚೀನಾದಿಂದಲೇ ಶುರುವಾಗಿದೆ. ಐದು ವರ್ಷಗಳ ನಂತರ ಇದೀಗ ಮತ್ತೊಂದು ಅಪಾಯಕಾರಿ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ(China Virus). ಈ ವೈರಸ್‌ನ ಹೆಸರು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂದು ಹೇಳಲಾಗುತ್ತಿದೆ. ಇದು ಕರೊನಾ ವೈರಸ್‌ನಷ್ಟೇ ಸಾಂಕ್ರಾಮಿಕ ಮತ್ತು ಮಾರಕ ಎಂದು ಹೇಳಲಾಗುತ್ತಿದೆ.

ಈ ಹೊಸ ವೈರಲ್​ನಿಂದಾಗಿ ಚೀನಾದಲ್ಲಿ ಇದುವರೆಗೂ ನೂರಾರು ಜನರು ಮೃತಪಟ್ಟಿದ್ದಾರೆ. ಕೆಲವು ವರದಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಚೀನಾದಲ್ಲಿ ಹೊಸ ವೈರಸ್​​​ ದಾಳಿ ಸಂಭವಿಸಿರುವುದಾಗಿ ಸೂಚಿಸಲಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV), ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್​​-19 ವೈರಸ್‌ಗಳು ವೇಗವಾಗಿ ಹರಡುತ್ತಿವೆ. ಆಸ್ಪತ್ರೆಗಳು ಮತ್ತು ಸ್ಮಶಾನಗಳಲ್ಲಿ ಜಾಗವೇ ಇಲ್ಲದಂತಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಸ್ಪತ್ರೆಗಳಲ್ಲಿ ಜನಸಂದಣಿಯನ್ನು ಕಾಣಬಹುದು.

ಹೊಸ ವೈರಲ್​ ಕುರಿತು ಚೀನಾ ಸರ್ಕಾರ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO)ಯಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಇದನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಹೇಳಲಾಗುತ್ತಿದೆ. HMPV ಜ್ವರವು ಕರೋನಾ ವೈರಸ್​​ನಂತೆಯೇ ರೋಗಲಕ್ಷಣಗಳನ್ನು ಹೊಂದಿದೆ. ವೈರಸ್ ಹರಡಿದ ನಂತರ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ನಿಗೂಢ ನ್ಯುಮೋನಿಯಾ ಎಂದೂ ಕರೆಯಬಹುದು.

ವೈರಲ್​​ ವಿಡಿಯೋದಲ್ಲಿ ಚೀನಾದಲ್ಲಿ ಆಸ್ಪತ್ರೆಗಳು ಮತ್ತು ಸ್ಮಶಾನಗಳಲ್ಲಿ ಜನರು ಕಿಕ್ಕಿರಿದು ತುಂಬಿದೆ. ಅವರು ನ್ಯುಮೋನಿಯಾ ಮತ್ತು "ಶ್ವೇತ ಶ್ವಾಸಕೋಶ" ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ರಾಯಿಟರ್ಸ್ ಪ್ರಕಾರ, ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ಕಳೆದ ಶುಕ್ರವಾರ ನಿಗೂಢ ನ್ಯುಮೋನಿಯಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದೆ ಎಂದು ಹೇಳಿದೆ. ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟದ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ವೈರಸ್ ಕನಿಷ್ಠ ಆರು ದಶಕಗಳಿಂದ ಅಸ್ತಿತ್ವದಲ್ಲಿದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ ಎಂದು ವಿಷಯದ ಜ್ಞಾನವಿರುವ ಜನರು ಹೇಳುತ್ತಾರೆ. ಇದು ಸಾಮಾನ್ಯ ಉಸಿರಾಟದ ಕಾಯಿಲೆಯಾಗಿ ಪ್ರಪಂಚದಾದ್ಯಂತ ಹರಡಿದೆ. ಇದು ಮುಖ್ಯವಾಗಿ ಕೆಮ್ಮು ಮತ್ತು ಸೀನುವಿಕೆಯ ಮೂಲಕ ಹರಡುತ್ತದೆ. ಸೋಂಕಿತ ಜನರ ಸಂಪರ್ಕದಿಂದ ಅಥವಾ ಕಲುಷಿತ ಪರಿಸರದಿಂದಲೂ ಒಬ್ಬರು ಸೋಂಕಿಗೆ ಒಳಗಾಗಬಹುದು. ಇದರ ಪರಿಣಾಮವು ಮೂರರಿಂದ ಐದು ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಗುರುವಾರ ಚೀನಾ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಡಿಸೆಂಬರ್ 16 ಮತ್ತು 22ರ ನಡುವೆ ಉಸಿರಾಟದ ಸಮಸ್ಯೆಗಳ ಪ್ರಕರಣಗಳಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಚೀನಾದಲ್ಲಿ ಚಳಿಗಾಲ ಮತ್ತು ವಸಂತ ಋತುಗಳಲ್ಲಿ ವಿವಿಧ ಉಸಿರಾಟದ ಸಾಂಕ್ರಾಮಿಕ ರೋಗಗಳ ಸಾಧ್ಯತೆಯಿದೆ ಎಂದು ಆರೋಗ್ಯ ಅಧಿಕಾರಿ ಕಾನ್ ಬಿಯಾವೊ ಹೇಳಿದ್ದಾರೆ. ವಿವರವಾಗಿ ಏನನ್ನೂ ಹೇಳದ ಅವರು ಕಳೆದ ವರ್ಷಕ್ಕಿಂತ ಈ ವರ್ಷ ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net