ಕದ್ದ ಎಂಬ ಕಾರಣಕ್ಕೆ ಖಾಸಗಿ ಭಾಗಕ್ಕೆ ಚಿಲ್ಲಿ ಪೌಡರ್​ ಹಾಕಿದ್ರು! ವಿಡಿಯೋ ನೋಡಿದ್ರೆ ನಡುಕ ಹುಟ್ಟಿಸೋದು ಗ್ಯಾರಂಟಿ

Untitled-design-2024-08-27T152605.453
Published on

ಪಾಟ್ನಾ: ಕಳ್ಳನೆಂದು ಆರೋಪಿಸಿ ಯುವಕನ ಕೈಕಟ್ಟಿ ಆತನ ಖಾಸಗಿ ಭಾಗಕ್ಕೆ ಮೆಣಸಿನಕಾಯಿಪುಡಿ(ಚಿಲ್ಲಿ ಪೌಡರ್​​) ಹಾಕಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಬಿಹಾರದ ಅರಾರಿಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಸಗರು ಹೀನಕೃತ್ಯ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಬೈಕ್​ಗಳನ್ನು ಕದಿಯುತ್ತಿದ್ದ ಎಂದು ಆರೋಪಿಸಿ ಆತನ ಬಳಿ ಇಷ್ಟು ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕನ ಕೈಕಟ್ಟಿ ಆತನ ಪ್ಯಾಂಟನ್ನು ಬಿಚ್ಚಿದ್ದಾರೆ. ನಂತರ ಇನ್ನೊಬ್ಬ ಆತನನ್ನ ಬಾಗುವಂತೆ ಹೇಳಿ ಯುವಕನ ಖಾಸಗಿ ಭಾಗಕ್ಕೆ ಮೆಣಸಿನಕಾಯಿಪುಡಿಯನ್ನು ಸುರಿಯುತ್ತಿದ್ದಾನೆ. ಬಳಿಕ ಪೆನ್​​ ಬಳಸಿ ಖಾರದಪುಡಿಯನ್ನು ಆತನ ಖಾಸಗಿ ಭಾಗಕ್ಕೆ ತಳ್ಳುತ್ತಿದ್ದಾರೆ ಮತ್ತಷ್ಟು ಮೆಣಸಿನಕಾಯಿಪುಡಿಯನ್ನು ಹಾಕುತ್ತಿದ್ದಾರೆ. ಯುವಕ ನೋವಿನಿಂದ ಕಿರುಚುತ್ತಲೇ ಇದ್ದರು ಆತನನ್ನು ಬಿಡದೆ ಅಲ್ಲೇ ಕೂರಿಸಿರುವುದನ್ನು ನೋಡಬಹುದಾಗಿದೆ.

ಸಂತ್ರಸ್ತ ಯುವಕ ನೋವಿನಿಂದ ಕಿರುಚುತ್ತಿದ್ದರೂ ನೆರದಿದ್ದ ಜನರಲ್ಲಿ ಒಬ್ಬರು ರಕ್ಷಿಸಲು ಬರಲಿಲ್ಲ. ಕೆಲವರು ವಿಡಿಯೋ ಮಾಡುತ್ತಿದ್ದರೆ, ಮತ್ತೆ ಕೆಲವರು ಪೊಲೀಸರಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಪೊಲೀಸರಿಗೆ ಕರೆ ಮಾಡಲು ಸಮ್ಮತಿಸದೆ ಪೊಲೀಸರು ಅವನನ್ನು ಹೋಗಲು ಬಿಡುತ್ತಾರೆ ಎಂದು ಪ್ರತಿಕ್ರಿಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳ್ಳತನದ ಆರೋಪಿ ಎಂದು ವ್ಯಕ್ತಿಯ ಮೇಲೆ ಈ ಅಮಾನವೀಯ ಕೃತ್ಯ ಎಸಗಲಾಗಿದೆ. ಈ ಕೃತ್ಯ ಎಸಗುತ್ತಿರುವ ಗುಂಪಿನಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇತರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅರಾರಿಯಾ ಪೊಲೀಸರು ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಪಕ್ಷಗಳು ಆರ್‌ಜೆಡಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕೃತ್ಯವು ತಾಲಿಬಾನಿಗಳು ನಡೆದುಕೊಳ್ಳುವುದಕ್ಕಿಂತ ಕೆಟ್ಟದ್ದಾಗಿದೆ ಎಂದು ಆರೋಪಿಸಿದೆ. ಸದ್ಯ ವಿಡಿಯೋ ವೈರಲ್​ ಆಗುತ್ತಿದ್ದು ಅಮಾನುಷ ಕೃತ್ಯ ಎಂದ ಪ್ರತಿಕ್ರಿಯ ವ್ಯಕ್ತವಾಗುತ್ತಿದೆ.(ಎಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net