

ಬೆಂಗಳೂರು: ಗ್ರಾಮ ಪಂಚಾಯಿತಿ ಅರಿವು ಕೆಂದ್ರದ ಮೂಲಕ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ(Summer camp for rural children through Gram Panchayat Awareness Center) ನಡೆಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾದಾಗಿನಿಂದ ರಜೆ ಅಂತ್ಯಗೊಳ್ಳುವವರೆಗೆ ಏಪ್ರಿಲ್ ನಿಂದ ಮೇ 2025ಲ್ಲಿ ಆಯೋಜಿಸುವಂತೆ ತಿಳಿಸಲಾಗಿದೆ.
15 ದಿನಗಳ ಕಾಲ ಈ ಶಿಬಿರ ಆಯೋಜಿಸಬೇಕು. ಶಿಬಿರದಲ್ಲಿ ಮಕ್ಕಳಿಗೆ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆ ಮತ್ತು ಆಟಗಳಿಗೆ ಒತ್ತು ನೀಡಬೇಕು ಎಂದು ಹೇಳಲಾಗಿದೆ.
ಶಿಬಿರವನ್ನು ಅರಿವು ಕೇಂದ್ರದ ಮೇಲ್ವಿಚಾರಕರು, ಗ್ರಾಪಂ ಪುನರ್ವಸತಿ ಕಾರ್ಯಕರ್ತರು, ಗುರುತಿಸಿದ ಸ್ವಯಂ ಸೇವಕರೊಂದಿಗೆ ಪರಿಣಾಮಕಾರಿಯಾಗಿ ಆಯೋಜಿಸಲು ಕ್ರಮವಹಿಸಬೇಕು. ಪಿಡಿಒಗಳು ಆಡಳಿತಾತ್ಮಕ ಬೆಂಬಲ ನೀಡುವುದರ ಜತೆಗೆ ಶಿಬಿರದ ಪೂರ್ಣ ಮೇಲುಸ್ತುವಾರಿ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.