ವಿಜಯವಾಣಿ ಮುದ್ರಣಾಲಯ ವೀಕ್ಷಿಸಿದ ಮಕ್ಕಳು

school children visit vijayavani press
ಶಿವಮೊಗ್ಗ ವಿಜಯವಾಣಿ ಪತ್ರಿಕಾ ಕಚೇರಿಯ ಮುದ್ರಣಾಲಯಕ್ಕೆ ಗಾಡಿಕೊಪ್ಪದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳ ಭೇಟಿ ನೀಡಿದರು.
Published on

ಶಿವಮೊಗ್ಗ: ಶಿವಮೊಗ್ಗ ಗಾಡಿಕೊಪ್ಪದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳು ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಕಚೇರಿಗೆ ಭೇಟಿ ನೀಡಿ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.

ವಿಆರ್‌ಎಲ್ ಟ್ರಾವೆಲ್ಸ್ ಮೂಲಕ ಗಾಡಿಕೊಪ್ಪದ ಗುಡ್‌ಲಕ್ ಸರ್ಕಲ್ ಸಮೀಪದ ವಸತಿ ಶಾಲೆಯ 7ರಿಂದ 10ನೇ ತರಗತಿಯ 60 ಮಕ್ಕಳನ್ನು ‘ವಿಜಯವಾಣಿ’ ಕಚೇರಿಗೆ ಕರೆತರಲಾಗಿತ್ತು. ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಮುಂಜಾನೆಯೇ ಪತ್ರಿಕೆ ಮೂಲಕ ಅರಿಯುತ್ತಿದ್ದ ಮಕ್ಕಳು, ಪತ್ರಿಕೆಗಳು ಮುದ್ರಣ ಆಗುವುದನ್ನು ಸ್ವತಃ ಕಣ್ತುಂಬಿಕೊಂಡರು.

ಪ್ರತಿದಿನ ಬೆಳಗ್ಗೆ ವಸತಿ ಶಾಲೆಗೆ ಪತ್ರಿಕೆ ಬರುತ್ತಿತ್ತು. ಅದನ್ನು ಓದಿ ಸಮಾಜದಲ್ಲಿನ ಆಗು-ಹೋಗುಗಳನ್ನು ತಿಳಿದುಕೊಳ್ಳುತ್ತಿದ್ದ ಮಕ್ಕಳಿಗೆ ಸುದ್ದಿಗಳ ಮೂಲ ಯಾವುದು ?, ಸುದ್ದಿಗಳನ್ನು ಯಾರು, ಎಲ್ಲಿಂದ, ಹೇಗೆ ಕಳುಹಿಸುತ್ತಾರೆ ?, ಸುದ್ದಿ ರೂಪ ಪಡೆದ ವಿಷಯವು ಪೇಜ್ ಮಾಡುವುದು, ಹೆಡ್‌ಲೈನ್, ಫೋಟೋ ಹಾಕುವುದು, ಕಲರಿಂಗ್ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಗಮನ ಸೆಳೆದರು.

ಪ್ರಸರಣ ವಿಭಾಗದಲ್ಲೂ ನಂಬರ್ 1 ಆಗಿರುವ ವಿಜಯವಾಣಿ ಪತ್ರಿಕೆಯ ಮುದ್ರಣ ಮತ್ತು ವಿತರಣೆ ಪ್ರಕ್ರಿಯೆ ಹೇಗೆಲ್ಲ ನಡೆಯಲಿದೆ. ಮುದ್ರಣಕ್ಕೂ ಮುನ್ನ ಪೇಜ್ ವಿನ್ಯಾಸ, ಬಣ್ಣಗಳ ಮಿಶ್ರಣ ಸೇರಿ ಮುದ್ರಣಾಲಯದಲ್ಲಿ ಪ್ಲೇಟ್ ಮೇಕಿಂಗ್ ಬಗ್ಗೆ ಮಾಹಿತಿ ಪಡೆದರು. ವಿಜಯವಾಣಿ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ, ಮುಖ್ಯ ಉಪ ಸಂಪಾದಕ ಸಂದೇಶ ಹೆಗ್ಡೆ, ಮುದ್ರಣ ವಿಭಾಗದ ಮುಖ್ಯಸ್ಥ ಹರೀಶ್ ಪತ್ರಿಕೆ ಮುದ್ರಣ ಅವರು ಸಂಪಾದಕೀಯ ವಿಭಾಗದ ಕಾರ್ಯವೈಖರಿ ಬಗ್ಗೆ ಕುರಿತು ವಿವರಿಸಿದರು.

ವಿಆರ್‌ಎಲ್ ಬಸ್ ವ್ಯವಸ್ಥೆ: ವಿದ್ಯಾರ್ಥಿಗಳನ್ನು ವಿಜಯವಾಣಿ ಕಚೇರಿಗೆ ಕರೆತರಲು ವಿಆರ್‌ಎಲ್ ಟ್ರಾವೆಲ್ಸ್ನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಗಾಡಿಕೊಪ್ಪದ ವಸತಿ ಶಾಲೆಯಿಂದ ನ್ಯೂಮಂಡ್ಲಿಯ ಕಚೇರಿಗೆ ಕರೆತಂದು, ಆನಂತರ ಅದೇ ಬಸ್‌ನಲ್ಲಿ ವಸತಿ ಶಾಲೆಗೆ ಬಿಟ್ಟು ಬರಲಾಯಿತು. ಬಸ್ಸಿನ ಸೌಲಭ್ಯ, ನಿರ್ವಹಣೆ ಬಗ್ಗೆ ಮಕ್ಕಳು ಖುಷಿಪಟ್ಟರು. ಪತ್ರಿಕಾ ಕಚೇರಿ ಮತ್ತು ಮುದ್ರಣಾಲಯ ವೀಕ್ಷಣೆಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಟ್ಟ ಸಂಸ್ಥೆಗೂ ಧನ್ಯವಾದ ಅರ್ಪಿಸಿದರು.

ಕಚೇರಿಗೆ ಭೇಟಿ ನೀಡ್ಬೇಕಾ ? ವಿಜಯವಾಣಿ ಶಿವಮೊಗ್ಗದ ಮುದ್ರಣ ಘಟಕಕ್ಕೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಬಯಸುವ ಶಾಲೆಗಳು ಸಂಪರ್ಕಿಸಿ... ಶಿವಮೊಗ್ಗ 88844 31959-88844 32442 ಚಿಕ್ಕಮಗಳೂರು: 88844 32372-88844 32426

ಪತ್ರಿಕೆಗಳ ಮುದ್ರಣದ ಹಿಂದೆ ಎಷ್ಟೆಲ್ಲ ಶ್ರಮ ಇರುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡುವಂತಾಯಿತು. ಪತ್ರಿಕೆಗಳ ಮುದ್ರಣದ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಸರ್ಕಾರಿ ವಸತಿ ಶಾಲೆ ಮಕ್ಕಳಿಗೆ ಕಚೇರಿಯ ಕಾರ್ಯವೈಖರಿ ಮತ್ತು ಮುದ್ರಣದ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಮಾಡಿಕೊಟ್ಟ ವಿಜಯವಾಣಿ ಸಂಸ್ಥೆಗೆ ಧನ್ಯವಾದಗಳು. ಇಂದಿನ ಸಾಮಾಜಿಕ ಜಾಲತಾಣಗಳ ಆಕರ್ಷಣೆ ನಡುವೆಯೂ ಪತ್ರಿಕೆಗಳು ಇಂದಿಗೆ ಅವಶ್ಯಕ. ಯೋಗೇಶ್ ಎಚ್.ಬಳಿಗಾರ, ಮುಖ್ಯ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net