

ರಾಣೆಬೆನ್ನೂರ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾಥಿರ್ಗಳಿಗೆ ಪರೀಾ ಮಾರ್ಗದಶಿರ್ಯಾಗಿರುವ ವಿಜಯವಾಣಿ ವಿದ್ಯಾಥಿರ್ ಉದ್ಯೋಗ ಮಿತ್ರ ಪತ್ರಿಕೆಯನ್ನು ಪ್ರತಿಯೊಬ್ಬ ವಿದ್ಯಾಥಿರ್ ಓದುವ ಮೂಲಕ ಪರೀೆಯಲ್ಲಿ ಉತ್ತಮ ಅಂಕಗಳಿಸುವ ಜತೆಗೆ ಸಾಮಾನ್ಯಜ್ಞಾನ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಶುಕ್ರವಾರ ವಿದ್ಯಾಥಿರ್ಗಳಿಗೆ ವಿಜಯವಾಣಿ ವಿದ್ಯಾಥಿರ್ ಉದ್ಯೋಗ ಮಿತ್ರ ಪತ್ರಿಕೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳು ಉತ್ತಮವಾಗಿ ಅಧ್ಯಯನ ಮಾಡಿದರೆ ಮುಂದಿನ ದಿನದಲ್ಲಿ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವ ಸಾಧ್ಯವಾಗುತ್ತದೆ. ಪಾಲಕರು ಹಾಗೂ ಶಿಕ್ಷಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗುರುರಾಜ ಉಪ್ಪಿನ ಮಾತನಾಡಿ, ಭೂಮಿ ಮೇಲಿನ ಎಷ್ಟೋ ಜೀವರಾಶಿಗಳಲ್ಲಿ ಮನುಷ್ಯ ಪುಣ್ಯ ಮಾಡಿದ್ದರಿಂದ ಬುದ್ಧಿವಂತನಾಗಿದ್ದಾನೆ. ಬಡತನದ ಅವಮಾನ ಜೀವನದಲ್ಲಿ ಏನನ್ನಾದರೂ ಬದಲಾಯಿಸುವ ಶಕ್ತಿಯಿದೆ. ವಿದ್ಯಾಥಿರ್ಗಳು ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದರು.
ಶಾಲೆಯ ಶಿಕ್ಷಕರು ರಾಜ್ಯ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಎಸ್ಡಿಎಂಸಿ ಅಧ್ಯಕ್ಷ ಗುರುರಾಜ ಉಪ್ಪಿನ ಹಾಗೂ ಗ್ರಾಮದ ಹಿರಿಯ ಮುಖಂಡ ಮಾರುತಿ ಗುಡಿಯವರ ಅವರನ್ನು ಸನ್ಮಾನಿಸಿದರು.
ಮುಖ್ಯ ಶಿಕ್ಷಕ ಬಸವರಾಜ ಸೋಮಕ್ಕಳವರ, ವಿಜಯವಾಣಿ ಪ್ರಸಾರಾಂಗ ವಿಭಾಗದ ಪ್ರತಿನಿಧಿ ಕೊಟ್ರೇಶ ಅದವಾನಿಮಠ, ವರದಿಗಾರ ಕರಿಯಪ್ಪ ಅರಳಿಕಟ್ಟಿ, ಶಿಕ್ಷಕರಾದ ಜಯಶ್ರೀ ಮರಡೆಪ್ಪನವರ, ಎಚ್.ಎಲ್. ಕಡೇಮನಿ, ಸಂತೋಷ ನಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.