ಮಕ್ಕಳನ್ನು ಸಾಧಕರನ್ನಾಗಿಸುವುದು ಶಿಕ್ಷಕರ ಕರ್ತವ್ಯ

17ALD01
ಅಳವಂಡಿ ಸಮೀಪದ ಕವಲೂರು ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಪ್ರಾಚಾರ್ಯ ಕೆ.ಬಿ.ನಾಯಕ, ಜಾನಪದ ಕಲಾವಿದ ಜೀವನಸಾಬ ಬಿನ್ನಾಳ, ಪ್ರಮುಖರಾದ ವೀರೇಶ, ಅನ್ವರ, ಹನುಮಂತ, ಹನುಮಪ್ಪ, ಮುತ್ತಣ್ಣ, ಮಹಾಂತೇಶ, ಚಂದ್ರಗಿರಿಯಪ್ಪ ಇದ್ದರು.
Published on

ಅಳವಂಡಿ: ಪಾಲಕರು ಮಕ್ಕಳಿಗೆ ಬಾಹ್ಯ ಆಸ್ತಿ ಗಳಿಸುವದಕ್ಕಿಂತ ಶಿಕ್ಷಣವೆಂಬ ಆಸ್ತಿ ನೀಡಿ ಎಂದು ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಹೇಳಿದರು.

ಸಮೀಪದ ಕವಲೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾಧಕರನ್ನಾಗಿಸುವುದು ಶಿಕ್ಷಕರ ಕರ್ತವ್ಯ. ಪ್ರತಿ ಮಗುವಿನಲ್ಲಿ ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಅನಾವರಣ ಮಾಡುವ ಜವಾಬ್ದಾರಿ ಶಿಕ್ಷಕ ಹಾಗೂ ಪಾಲಕರದ್ದು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ. ಮಕ್ಕಳು ಕೂಡ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಅಭ್ಯಾಸ ಮಾಡಬೇಕು ಎಂದರು.

ಪ್ರಾಚಾರ್ಯ ಕೆ.ಬಿ.ನಾಯಕ ಮಾತನಾಡಿ, ಶಾಲೆ ಎಂಬುದು ದೇವಾಲಯ ಇದ್ದ ಹಾಗೇ. ಈ ದೇವಾಲಯದಲ್ಲಿ ಮಕ್ಕಳು ಸರ್ಕಾರ ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಇದರ ಜತೆಗೆ ಸಂಸ್ಕಾರ, ವಿನಯತೆ ಬೆಳಸಿಕೊಂಡಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಜಾನಪದ ಗಿತೆಗಳ ಮೂಲಕ ಮಕ್ಕಳನ್ನು ರಂಜಿಸಲಾಯಿತು. ಸಿಆರ್‌ಪಿ ವೀರೇಶ ಕೌಟಿ, ಪ್ರಮುಖರಾದ ಹನುಮಂತ ಮೂಲಿಮನಿ, ಮುತ್ತಣ್ಣ ಬಿಸರಳ್ಳಿ, ಅನ್ವರ ಗಡಾದ, ಹನುಮಂತ ಜೋಗಿನ, ಮಹಾಂತೇಶ ಸಿಂದೋಗಿಮಠ, ಖಾಜಾ ಹುಸೇನಸಾಬ, ದೇವಿರಪ್ಪ, ಚಂದ್ರಗಿರಿಯಪ್ಪ, ಜಿ.ಕೋಟ್ರೇಶಗೌಡ, ಅರ್ಜುನ, ಅಶೋಕ ಕೊಣ್ಣುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net