ಛದ್ಮವೇಷದಲ್ಲಿ ಕಂಗೊಳಿಸಿದ ಮಕ್ಕಳು

28
Published on

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಂಜನಗೂಡು ಹಾಗೂ ಸುಧಾಮಾಸ್ ಕ್ರಿಯೇಷನ್ಸ್ ಸಹಯೋಗದಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಶನಿವಾರ ನಂಜನಗೂಡಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಛದ್ಮವೇಷ, ಭಜನೆ ಹಾಗೂ ಕಥೆ ಹೇಳುವ ಸ್ಪರ್ಧೆಗಳು ನಡೆದವು. ನೂರಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಛದ್ಮವೇಷದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಪ್ರಸಾದ ವಿನಿಯೋಗ ನಡೆಯಿತು. ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು, ಪಾಲಕರು ಭಾಗವಹಿಸಿ ಭಾರತೀಯ ಸಂಸ್ಕೃತಿ ವಿಜೃಂಭಿಸುವಂತೆ ಮಾಡಿದರು.
ಪರಿಷತ್ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿದರು. ವಿದ್ಯಾರಣ್ಯ ಸಾಹಿತ್ಯ ಕೂಟದ ಸಂಚಾಲಕ ಗೋಪಿನಾಥ್, ಸುನಾದ ವಿನೋದಿನಿ ಸಂಸ್ಥೆಯ ಡಾ.ಮಂಜುಳಾ, ಶಿಕ್ಷಕರ ಸಂಘದ ಸಾಹಿತ್ಯ ಕೂಟದ ಸಂಚಾಲಕ ಚೇತನ್ ಶರ್ಮ, ಧನ್ಯಶ್ರೀ, ಅನನ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net