ಚಾಕೊಲೇಟ್ ಎಂದು ಜೀನ್ಸ್​ ಪ್ಯಾಂಟ್ ಬಟನ್ ಕೊಟ್ಟ ಅಕ್ಕ; ಉಸಿರುಗಟ್ಟಿ ಪ್ರಾಣಾಪಾಯಕ್ಕೆ ಸಿಲುಕಿತು 2 ತಿಂಗಳ ಮಗು

Jeans Pant Button
ಸಾಂದರ್ಭಿಕ ಚಿತ್ರ
Published on

ಉತ್ತರಕನ್ನಡ: ಚಾಕೊಲೇಟ್ ಎಂದು ಅಕ್ಕ ಕೊಟ್ಟ ಜೀನ್ಸ್​ ಪ್ಯಾಂಟ್​ ಬಟನ್ ನುಂಗಿ ಎರಡು ತಿಂಗಳ ಮಗು ಉಸಿರುಗಟ್ಟಿ ಪ್ರಾಣಾಪಾಯಕ್ಕೆ ಸಿಲುಕಿದ ಪ್ರಕರಣವೊಂದು ನಡೆದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಉತ್ತರಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ಬಳಿ ಪಾಲಿಷ್ ಕಮಲ-ಕಿಶೋರ ಅವರ ಪುತ್ರಿ, ಎರಡು ತಿಂಗಳ ಮಗು ಅಮೃತಾ ಜೀನ್ಸ್ ಪ್ಯಾಂಟ್​ ಬಟನ್ ನುಂಗಿದ್ದಳು. ಈಕೆಯ ಅಕ್ಕ 2 ವರ್ಷದ ನಮ್ರತಾ ಆಟವಾಡುತ್ತಿದ್ದಾಗ ಚಾಕೊಲೇಟ್ ಎಂದು ಜೀನ್ಸ್​ ಪ್ಯಾಂಟ್ ಬಟನ್ ನೀಡಿದ್ದಳು.

ಆ ಜೀನ್ಸ್ ಪ್ಯಾಂಟ್ ಬಟನ್ ನುಂಗಿದ ಮಗು ಉಸಿರುಗಟ್ಟಿ ಪ್ರಾಣಾಪಾಯಕ್ಕೆ ಸಿಲುಕಿ ಒದ್ದಾಟ ಅನುಭವಿಸಿತ್ತು. ತಕ್ಷಣ ಪಾಲಕರು ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಸರ್ಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ನಡೆಸಿದ್ದ ಚಿಕಿತ್ಸೆ ಯಶಸ್ವಿಯಾಗಿದೆ. ಕೊಳವೆ ಮೂಲಕ ಬಟನ್ ಹೊರ ತೆಗೆದು ಹಸುಳೆಯ ಜೀವ ಉಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net