ನೆಲದ ಮೇಲೆ ನಡೆಯುತ್ತಿದ್ದ ಜೀರುಂಡೆಯನ್ನು ಹಿಡಿದು ನುಂಗಿ 1 ವರ್ಷದ ಮಗು ಸಾವು! beetle

beetle
Published on

ತಮಿಳುನಾಡು: ( beetle ) ನೆಲದ ಮೇಲೆ ಹರಿಯುತ್ತಿದ್ದ ಜೀರುಂಡೆಯನ್ನು ಹಿಡಿದು ಮಗು ನುಂಗಿ ಉಸಿರಾಡಲು ಸಾಧ್ಯವಾಗದೇ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಪೆರಿಯಪಾಳ್ಯಂ ಬಳಿಯ ತಾಮರೈಪಕ್ಕಂ ಶಕ್ತಿ ನಗರದಲ್ಲಿ ನಡೆದಿದೆ.

ರೈತ ಕಾರ್ತಿಕ್ ಕಳೆದ ಹತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಕುಟುಂಬದ ಜತೆ ವಾಸಿಸುತ್ತಿದ್ದ. ಅವರ ಮಗಳು ಗುಗಶ್ರೀ (1) ಸೋಮವಾರ ಬೆಳಿಗ್ಗೆ ಮನೆಯಲ್ಲಿ ಆಟವಾಡುತ್ತಿದ್ದಾಗ ನೆಲದ ಮೇಲೆ ತೆವಳುತ್ತಿದ್ದ ಹುಳವನ್ನು ನುಂಗಿದಳು. ಹುಳು ಗಂಟಲಿನಲ್ಲಿ ಸಿಲುಕಿಕೊಂಡು ಮಗು ಉಸಿರುಗಟ್ಟಿಸಲು ಪ್ರಾರಂಭಿಸಿತು. ಆದರೆ ಈ ವಿಚಾರ ತಿಳಿಯದ ಪೋಷಕರು ಮಗುವಿನ ಆರೋಗ್ಯದಲ್ಲಿ ಎನೋ ಸಮಸ್ಯೆ ಆಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಪೋಷಕರು ತಕ್ಷಣ ಮಗುವನ್ನು ತಾಮರೈಪಕ್ಕಂ ಪ್ರದೇಶದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ನಂತರ, ಉತ್ತಮ ಚಿಕಿತ್ಸೆಗಾಗಿ ತಿರುವಲ್ಲೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಗು ಸಾವನ್ನಪ್ಪಿತು.

ಮಗುವಿನ ಸಾವಿಗೆ ಕಾರಣ ತಿಳಿಯದ ಪೋಷಕರು, ಆರಂಭದಲ್ಲಿ ಗಂಟಲಿನಲ್ಲಿ ಸಿಲುಕಿಕೊಂಡ ಆಹಾರದ ತುಂಡನ್ನು ತಿಂದು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಸತ್ಯ ಬಹಿರಂಗವಾಯಿತು. ಮಗುವಿನ ಶ್ವಾಸನಾಳದಲ್ಲಿ ಹುಳು ಇರುವುದನ್ನು ವೈದ್ಯರು ಕಂಡುಕೊಂಡರು.

ಗಮನಿಸಿ: ಚಿಕ್ಕ ಮಕ್ಕಳಿರುವ ಮನೆಯಲ್ಲಿ ದಿನದ 24 ಗಂಟೆಯೂ ಜಾಗರೂಕರಾಗಿರಬೇಕು. ಮಕ್ಕಳು ತಮಗೆ ಸಿಗುವ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ, ಅಥವಾ ಅವರು ನಡೆದು ಬಕೆಟ್ ಅಥವಾ ಕಾಲುವೆಗೆ ಬೀಳುತ್ತಾರೆ. ಅದಕ್ಕಾಗಿಯೇ ಪೋಷಕರು ಅವರ ಮೇಲೆ ನಿಗಾ ಇಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net