ಕಿಚ್ಚಸುದೀಪ್ ಮಗಳ ಪಾತ್ರದಲ್ಲಿ ನಟಿಸಿದ್ದ ಬಾಲಕಿ ಈಗ ಹೀರೋಯಿನ್! ಎಷ್ಟು ಕ್ಯೂಟ್ ಇದ್ದಾಳೆ ನೋಡಿ..

jesika
Published on

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಟನೆಯ ‘ವೀರ ಮದಕರಿ’ ಚಿತ್ರದಲ್ಲಿ ನಟಿಸಿದ್ದ ಬಾಲ ನಟಿ ಜೆರುಶಾ ಕ್ರಿಸ್ಟೋಫರ್​ ಈಗ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕ ಮಹೇಶ್​ ಬಾಬು ಅನೇಕ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಆ ಪೈಕಿ ಬಹುತೇಕ ನಟಿಯರು ಯಶಸ್ವಿಯಾಗಿದ್ದಾರೆ. ಮಹೇಶ್​ ಬಾಬು ನಿರ್ದೇಶನದ ಹೊಸ ಸಿನಿಮಾಗೆ ಈಗ ನಟಿ ಜೆರುಶಾ ಹೀರೋಯಿನ್​ ಆಗಿದ್ದಾರೆ. ಮೇ ತಿಂಗಳಿಂದ ಈ ಚಿತ್ರದ ಶೂಟಿಂಗ್​ಆರಂಭವಾಗುತ್ತಿದೆ.

ಮಹೇಶ್​ ಬಾಬು ಅವರು ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಸ್ಯಾಂಡಲ್​ವುಡ್​ಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಘೋಷಣೆ ಆಗಿದೆ. ಇದೇ ಸಿನಿಮಾದಲ್ಲಿ ನಟಿ ಜೆರುಶಾ ಅಭಿನಯಿಸುತ್ತಿದ್ದಾರೆ.

‘ಮೆರವಣಿಗೆ’ ಸಿನಿಮಾದಿಂದ ಐಂದ್ರಿತಾ ರೇ, ‘ಚಿರು’ ಸಿನಿಮಾದಿಂದ ಕೃತಿ ಕರಬಂದ, ‘ಅಜಿತ್’ ಚಿತ್ರದಿಂದ ನಿಕ್ಕಿ ಗಲ್ರಾನಿ, ‘ಕ್ರೇಜಿ ಬಾಯ್’ ಸಿನಿಮಾದ ಮೂಲಕ ಆಶಿಕಾ ರಂಗನಾಥ್ ಹಾಗೂ ‘ಅಪರೂಪ’ ಚಿತ್ರದ ಮೂಲಕ ನಟಿ ಹೃತಿಕಾ ಶ್ರೀನಿವಾಸ್ ಅವರನ್ನು ಪರಿಚಯಿಸಿದ್ದು ಇದೇ ಮಹೇಶ್​ ಬಾಬು. ಈಗ ಮಹೇಶ್ ಬಾಬು ಅವರ ಸಿನಿಮಾ ಮೂಲಕ ಜೆರುಶಾ ಅವರು ಹೀರೋಯಿನ್​ ಆಗಿ ಲಾಂಚ್ ಆಗುತ್ತಿದ್ದಾರೆ.

ಜೆರುಶಾ ಅವರಿಗೆ ನಟನೆ ಹೊಸದೇನೂ ಅಲ್ಲ. ಈ ಮೊದಲು ಕಿಚ್ಚ ಸುದೀಪ್ ನಟನೆಯ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲ ನಟಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಳು. ಅಲ್ಲದೇ, ಅನೇಕ ಜಾಹೀರಾತುಗಳಲ್ಲೂ ನಟಿಸಿದ್ದಳು. ರಂಗಭೂಮಿ ಹಿನ್ನೆಲೆ ಕೂಡ ಈ ಚೆಲುವೆಗೆ ಇದೆ.

ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಜೆರುಶಾ ನಟಿಸಲಿದ್ದಾಳೆ. ಈ ಸಿನಿಮಾದಲ್ಲಿನ ಮತ್ತೊಂದು ಪ್ರಮುಖ ಪಾತ್ರಕ್ಕೆ ಇನ್ನೋರ್ವ ನಟಿಯ ಆಯ್ಕೆ ಆಗಲಿದೆ. ಆ ಬಗ್ಗೆ ಮಹೇಶ್ ಬಾಬು ಅವರು ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ಹೊಸ ಚಿತ್ರಕ್ಕೆ ಇನ್ನೂ ಟೈಟಲ್​ ಅಂತಿಮವಾಗಿಲ್ಲ. ಯುವ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಚೇತನ್ ಹಾಗೂ ಅನುರಾಗ್ ಅವರು ನಿರ್ಮಾಣ ಮಾಡಲಿದ್ದಾರೆ.

ಮೇ ತಿಂಗಳಲ್ಲಿ ಶೂಟಿಂಗ್​ ಆರಂಭ ಆಗಲಿದೆ. ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ, ಸತ್ಯ ಅವರ ಛಾಯಾಗ್ರಾಹಣ ಈ ಸಿನಿಮಾಗೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net