ಮಗು ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

accident-15
Published on

ಬೆಂಗಳೂರು: ಆಕಸ್ಮಿಕವಾಗಿ ಕಾರು ಹರಿದು ಮಗು ಸಾವನ್ನಪ್ಪಿದ್ದ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಎಚ್.ಎಸ್.ಆರ್.ಲೇಔಟ್ ಆಗರದಲ್ಲಿ ಏ.೨೨ ರಾತ್ರಿ ೧೧.೩೦ ಕ್ಕೆ ಈ ಘಟನೆ ನಡೆದಿತ್ತು.
ಒಂದೂವರೆ ವರ್ಷದ ಶೈಹಿಜಾ ಜನ್ನತ್ ಎಂಬ ಮಗು ತಂದೆಯ ಕಾರಿಗೆ ಸಿಲುಕಿ ಮೃತಪಟ್ಟಿತ್ತು.
ಸಂಬಂಧಿಯ ಮದುವೆ ಇದ್ದ ಕಾರಣ ಕುಟುಂಬ ಸಮೇತವಾಗಿ ಚನ್ನಪಟ್ಟಣಕ್ಕೆ ಹೋಗಿದ್ದರು.
ರಾತ್ರಿ ಕುಟುಂಬ ಸಮೇತವಾಗಿ ಮನೆಗೆ ಹಿಂತಿರುಗಿದ್ದರು. ಮನೆಯ ಬಳಿ ಎಲ್ಲರೂ ಕಾರಿನಿಂದ ಇಳಿದು ಒಳಗೆ ಹೋಗಿದ್ದರು. ಕಾರಿನಲ್ಲಿದ್ದ ಲಗೇಜ್ ಅನ್ನು ಮಗುವಿನ ತಂದೆ ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ಮಗು ತಂದೆ ಹಿಂದೆಯೇ ಹೊರಗೆ ಓಡಿ ಬಂದಿತ್ತು. ಇದನ್ನು ತಂದೆ ಗಮನಿಸಿರಲಿಲ್ಲ. ಕಾರಿನ ಹಿಂಬದಿ ಡೋರ್ ಬಳಿಯೇ ಮಗು ನಿಂತಿತ್ತು. ಇದನ್ನು ಗಮನಿಸದೆ ತಂದೆ ಆಕಸ್ಮಿಕವಾಗಿ ಮಗುವಿನ ಮೇಲೆ ಕಾರಿನ ಹಿಂಬದಿ ಚಕ್ರ ಹರಿಸಿಕೊಂಡು ಹೋಗಿದ್ದರು. ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಲಕಾರಿಯಾಗದೆ ಮಗು ಮೃತಪಟ್ಟಿದ್ದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net