

ಬಣಕಲ್: ಮಕ್ಕಳು ಇಚ್ಛಿಸುವ ಕ್ಷೇತ್ರಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆ ಒದಗಿಸಲು ಪಾಲಕರು ಮುಂದಾಗಬೇಕು ಎಂದು ಚಿಕ್ಕಮಗಳೂರು ಸಂತ ಜೋಸೆಫರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಾರ್ಸೆಲ್ ಪಿಂಟೊ ಹೇಳಿದರು.
ಬಣಕಲ್ ನಜರೆತ್ ಶಾಲೆಯ 27ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಮಾಡಬೇಕು. ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯೆ, ಸಿಸ್ಟರ್ ಹಿಲ್ಡಾ ಲೋಬೊ ಮಾತನಾಡಿ, ಪಾಲಕರು, ಮಕ್ಕಳು ಪರಿಸರ ಸ್ವಚ್ಛತೆ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆಯಿದೆ. ಪರಿಸರ ಸಂರಕ್ಷಣೆಯಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ದೊರೆಯಲಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪರಿಸರ ಸಂರಕ್ಷಣೆ ಅಗತ್ಯ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಎಲ್ಲರೂ ಗಿಡಗಳನ್ನು ಬೆಳೆಸಿ ಸ್ವಚ್ಛ ಪರಿಸರ ನಿರ್ಮಿಸಬೇಕು ಎಂದರು.
ಡಾ. ಶಬರೀಶ್ ಮಾತನಾಡಿ, ಜೀವನದ ಉತ್ತಮ ಮೌಲ್ಯಗಳನ್ನು ಶಾಲೆಯು ಕಲಿಸುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಚಿರಋಣಿಯಾಗಿರಬೇಕು ಎಂದು ತಿಳಿಸಿದರು. ಬಣಕಲ್ ಬಾಲಿಕಾ ಮರಿಯ ಚರ್ಚಿನ ಸಹಾಯಕ ಗುರು ಥಾಮಸ್ ಕಲಘಟಗಿ ಆಶೀರ್ವಚನ ನೀಡಿದರು.
ಶಾಲಾ ವಿದ್ಯಾರ್ಥಿಗಳು ನೃತ್ಯ, ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಿಟಿಎ ಸದಸ್ಯೆ ಅನಿತಾ, ಶಿಕ್ಷಕರಾದ ಪ್ರೆಸಿಲ್ಲಾ, ಡೈನಾ, ಸಾಂಚಿತಾ, ರೇಷ್ಮಾ, ಕೇಸರಿ, ರಜಿನಿ, ಯಾಸ್ಮಿನ್, ಅಭಿಧಾ, ಚಂದನಾ, ಹಲೀಮಾ, ವರ್ಷಾ, ರೇಖಾ, ಅನುಷಾ, ಲಿನ್ಸಿ, ಲಕ್ಷ್ಮೀದೇವಿ, ಬೆನ್ಜಿಟಾ, ರುಕ್ಸಾವಿ, ವಿನುತಾ, ಸಾಂಘವಿ, ಗಾಯತ್ರಿ, ಸೆವ್ರೀನ್, ಅನುಶ್ರೀ, ಐರಿನ್, ಟ್ರೀಜಾ, ಸಿಸ್ಟರ್ಸ್‌ಗಳಾದ ಅಮಲ್ ರಾಣಿ, ರಿತಿಕಾ, ಸಬೀನಾ ಇತರರಿದ್ದರು.