ಕರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮೂಡಿಗೆರೆಯ ಯುವಕರು ಮಾಡಿದ ತಂತ್ರ ಏನು?

chikkamagaluru 28 mar 20
Published on

ಚಿಕ್ಕಮಗಳೂರು: ಕರೊನಾ ಸೋಂಕು ಹರಡುವುದನ್ನು ತಡೆಯಲು ತಮ್ಮ ಗ್ರಾಮಕ್ಕೆ ದಿಗ್ಬಂಧನ ಹಾಕಲು ಮುಂದಾದ ಯುವಕರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಈಗ ಕಾಡು ಸೇರಿದ್ದಾರೆ.

ಮೂಡಿಗೆರೆ ತಾಲೂಕಿನ ಮರ್ಕುಲೆ ಗ್ರಾಮದ ಯುವಕರ ತಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಮುಚ್ಚಲು ಮುಂದಾಯಿತು. ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಯುವಕರು ಕಾಡಿಗೆ ತೆರಳಲು ನಿರ್ಧರಿಸಿದರು.

ಒಂದು ತಿಂಗಳಿಗೆ ಅಗತ್ಯವಾದಷ್ಟು ಆಹಾರ ಧಾನ್ಯ, ಹೊದಿಕೆ ಸೇರಿದಂತೆ ನಿತ್ಯ ಬಳಸುವ ವಸ್ತುಗಳನ್ನು ಸಂಗ್ರಹಿಸಿ ಬಣಕಲ್ ಸಮೀಪದ ಬಪ್ಲಿ ಗುಡ್ಡಕ್ಕೆ ಯುವಕರ ತಂಡ ತೆರಳಿತು. ಸ್ವತಃ ಅಡುಗೆ ಮಾಡಿಕೊಂಡು ಕಾಡಿನಲ್ಲೇ ತಿಂಗಳು ವಾಸ ಮಾಡಿ ನಂತರ ಗ್ರಾಮಕ್ಕೆ ಹಿಂದಿರುಗುವುದಾಗಿ ಚರಣ್​ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net