

ದಾವಣಗೆರೆ: ಇನ್ನು 15 ಕೆಎಸ್ಆರ್ಟಿಸಿ ಬಸ್ ಚಲಾಯಿಸುತ್ತೇನೆ. ಯಾರು ನೋಟಿಸ್ ಕೊಡ್ತಾರೆ ನಾನೂ ನೋಡ್ತೀನಿ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಇತ್ತೀಚೆಗೆ ಚಾಲಕರ ವಸ್ತ್ರ ಧರಿಸಿ ಕೆಎಸ್ಆರ್ಟಿಸಿ ಬಸ್ ಚಲಾಯಿಸಿದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಡಿಸಿ ನೋಟಿಸ್ ಜಾರಿ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೆಎಸ್ಆರ್ಟಿಸಿ ಡಿಸಿಗೆ ಇವೆಲ್ಲಾ ಸರಿ ಇರಲ್ಲ ಎಂದು ಹೇಳಿದ್ದೇನೆ. ಇನ್ನೂ 15 ಬಸ್ ಬಿಡಿಸುತ್ತೇನೆ, ಹಾಗೂ ಬಸ್ ಚಲಾಯಿಸುತ್ತೇನೆ. ಎತ್ತಿನಗಾಡಿಯಿಂದ 10 ಚಕ್ರ ಹೊಂದಿರುವ ಲಾರಿಯನ್ನು ಚಲಾಯಿಸಿದ್ದೇನೆ. ಈ ಆತ್ಮ ವಿಶ್ವಾಸದಿಂದ ಮೊನ್ನೆ ಕೆಎಸ್ಆರ್ಟಿಸಿ ಬಸ್ ಓಡಿಸಿದ್ದೇನೆ. ನಾನು ಬಸ್ ಚಲಾಯಿಸುವುದನ್ನು ಮಹಿಳೆಯರು ಶಿಳ್ಳೆ ಹೊಡೆದು ಸ್ವಾಗತಿಸಿದ್ದಾರೆ. ಕಾನೂನಿಗೆ ಗೌರವ ಕೊಡುತ್ತೇನೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್)