VIDEO| ಬಿಜೆಪಿ, ಕಾಂಗ್ರೆಸ್​ ಮತದಾರರಿಗೂ ನಾನು ಮುಖ್ಯಮಂತ್ರಿ, ಇನ್ನು ದೆಹಲಿಯಲ್ಲಿ ಅಭಿವೃದ್ಧಿ ಪರ್ವ; ನೂತನ ಸಿಎಂ ಅರವಿಂದ ಕೇಜ್ರಿವಾಲ

DEHLI CM
Published on

ನವದೆಹಲಿ: ಚುನಾವಣೆ ಮುಗಿದಿದೆ. ನೀವು ಯಾರಿಗೆ ಮತ​ ಹಾಕಿದ್ದೀರಿ ಎನ್ನುವುದು ನನಗೆ ಮುಖ್ಯವಲ್ಲ. ನೀವೆಲ್ಲರೂ ನನ್ನ ಕುಟುಂಬವಿದ್ದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಹೇಳಿದರು.

ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಅರವಿಂದ ಕೇಜ್ರಿವಾಲ್​ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದರು. ನನ್ನ ಗೆಲುವನ್ನು ನಿಮಗೇ ಅರ್ಪಿಸುತ್ತೇನೆ ಎಂದ ನೂತನ ಕೇಜ್ರಿವಾಲ, ಬಿಜೆಪಿ ಮತ್ತು ಕಾಂಗ್ರೆಸ್​ಗೆ ಮತ ಹಾಕಿದವರಿಗೂ ನಾನು ಮುಖ್ಯಮಂತ್ರಿ. ಅಭಿವೃದ್ಧಿ ಕೆಲಸಕ್ಕೆ ಯಾರೂ ಅಡ್ಡಿ ಮಾಡಿದರೂ ಕೇಳಲ್ಲ ಎಂದರು.

ಹಮ್​ ಹೋಂಗೆ ಕಾಮ್​ಯಾಬ್​... ಹಮ್​ ಹೋಂಗೆ ಕಾಮ್​ಯಾಬ್​... ಎಂಬ ಹಾಡನ್ನು ಹಾಡಿದರು. ಇದಕ್ಕೆ ಅಲ್ಲಿ ಸೇರಿದ್ದ ಜನ ದನಿಗೂಡಿಸಿದರು. ನಂತರ ಭಾರತ್​ ಮಾತಾ ಕೀ ಜೈ...ವಂದೇ ಮಾತರಂ ಘೋಷಣೆ ಕೂಗಿದರು.

ಮುಖ್ಯಮಂತ್ರಿ ಕೇಜ್ರಿವಾಲ್​ ಜತೆಗೆ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್​, ಗೋಪಾಲ್​ ರೈ, ಕೈಲಾಶ್​ ಗೆಹ್ಲೋಟ್​, ಇಮ್ರಾನ್​ ಹುಸ್ಸೇನ್​, ರಾಜೇಂದ್ರ ಪಾಲ್​ ಗೌತಮ್​ ಅವರೂ ಪ್ರಮಾಣ ವಚನ ಸ್ವೀಕರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net