

Chhaava : ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಛಾವಾ ಸಿನಿಮಾ ಈಗಾಗಲೇ 700 ಕೋಟಿ ರೂ. ಗಳಿಸಿದ್ದು, ಸಿನಿಮಾ ಕಲೆಕ್ಷನ್ನಲ್ಲಿ ಹಲವು ದಾಖಲೆಗಳನ್ನು ಮುರಿದು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಛಾವಾ ಚಿತ್ರವು 2025ರ ಟಾಪ್ ಚಿತ್ರವಾಗಿದೆ. ಮುಂಬರುವ ದಿನಗಳಲ್ಲಿ ಸಿಕಂದರ್, ಜಟ್, ವಾರ್ 2, ಸಿತಾರೆ ಜಮೀನ್ ಪರ್, ಹೌಸ್‌ಫುಲ್ 5, ಜಾಲಿ LLB 3 ಮತ್ತು ಆಲ್ಫಾ ಸಿನಿಮಾಗಳು ತೆರೆಕಾಣಲು ಸಿದ್ಧವಾಗಿವೆ. ಇನ್ನೂ ಛಾವಾ ಸಿನಿಮಾದ ದಾಖಲೆಗಳನ್ನು ಮುರಿದು ಪ್ರೇಕ್ಷಕರನ್ನು ಆಕರ್ಷಿಸುವ ಏಳು ಚಿತ್ರಗಳ ಒಂದು ಸಣ್ಣ ನೋಟ ಇಲ್ಲಿದೆ.
ಎ.ಆರ್. ಮುರುಗದಾಸ್ ಕಥೆ ಬರೆದು ನಿರ್ದೇಶಿಸಿಸಿರುವ ಆಕ್ಷನ್ ಥ್ರಿಲ್ಲರ್ ಸಿಕಂದರ್ ಅದ್ಭುತ ಸಿನಿಮೀಯ ಅನುಭವವನ್ನು ನೀಡುತ್ತದೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ಸೇರಿದಂತೆ ಅದ್ಭುತ ತಾರಾಗಣ ಚಿತ್ರದಲ್ಲಿದೆ. 28, ಮಾರ್ಚ್, 2025 ರಂದು ಈ ಚಿತ್ರ ಬಿಡುಗಡೆಯಾಗಲಿದೆ.
ಸಿಕಂದರ್
ಗೋಪಿಚಂದ್ ಮಲಿನೇನಿ ಬರೆದು ನಿರ್ದೇಶಿಸಿರುವ ಮತ್ತು ಮೈತ್ರಿ ಮೂವಿ ಮೇಕರ್ಸ್ ಹಾಗೂ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ರಣದೀಪ್ ಹೂಡಾ, ವಿನೀತ್ ಕುಮಾರ್ ಸಿಂಗ್, ಪ್ರಶಾಂತ್ ಬಜಾಜ್, ಸಯಾಮಿ ಖೇರ್ ಮತ್ತು ರೆಜಿನಾ ಕ್ಯಾಸಂಡ್ರ ನಟಿಸಿದ್ದಾರೆ. 10, ಏಪ್ರಿಲ್, 2025 ರಿಂದ ಈ ಸನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಜಟ್
2019ರ ಬ್ಲಾಕ್‌ಬಸ್ಟರ್ ವಾರ್ ಚಿತ್ರದ ಬಹು ನಿರೀಕ್ಷಿತ 2ನೇ ಭಾಗವಾದ ವಾರ್ 2 ಪ್ರೇಕ್ಷಕರ ಅಭಿಲಾಷೆಯನ್ನು ಹೊತ್ತು ನಿಂತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಹಾಗೂ ಹೃತಿಕ್ ರೋಷನ್ ಅವರು ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ವಾರ್ 2 ಚಿತ್ರ 14, ಆಗಸ್ಟ್, 2025 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ವಾರ್ 2
ಅಮಿರ್ ಖಾನ್ ಮತ್ತು ಕಿರಣ್ ರಾವ್ ನಿರ್ಮಿಸಿರುವ ಈ ಚಿತ್ರವು ಸ್ಪ್ಯಾನಿಷ್ ನ ಚಾಂಪಿಯನ್ಸ್ ಚಿತ್ರದ ರಿಮೇಕ್ ಆಗಿದ್ದು , ಅಮಿರ್ ಖಾನ್ ಮತ್ತು ಜೆನೆಲಿಯಾ ದೇಶ್ ಮುಖ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು 25, ಡಿಸೆಂಬರ್, 2025 ರಂದು ಬಿಡುಗಡೆಗೊಳ್ಳಲಿದೆ.
ಸಿತಾರೆ ಜಮೀನ್ ಪರ್
ಅತ್ಯಂತ ಜನಪ್ರಿಯ ಹಾಸ್ಯದಿಂದ ಕೂಡಿರುವ ಹೌಸ್‌ಫುಲ್ ಸಿನಿಮಾ ನೋಡಿ ನಗುವಿನ ಅಲೆಯಲ್ಲಿ ತೇಲಾಡಲು ಸಿನಿ ಪ್ರೇಕ್ಷಕರು ಕಾದು ಕುಳಿತ್ತಿದ್ದಾರೆ. ತರುಣ್ ಮನ್ಸುಖಾನಿ ನಿರ್ದೇಶಿಸಿರುವ ಮತ್ತು ಸಾಜಿದ್ ನಾಡಿಯಾಡ್‌ವಾಲಾ ತಮ್ಮ ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಸಂಜಯ್ ದತ್, ಬಾಬಿ ಡಿಯೋಲ್, ಫರ್ದೀನ್ ಖಾನ್, ನಾನಾ ಪಾಟೇಕರ್, ಜಾಕಿ ಶ್ರಾಫ್, ಡಿನೋ ಮೋರಿಯಾ, ಶ್ರೇಯಸ್ ತಲ್ಪಾಡೆ, ಜಾಕ್ವೆಲಿನ್ ಫರ್ನಾಂಡಿಸ್, ನರ್ಗಿಸ್ ಫಕ್ರಿ, ಚಿತ್ರಾಂಗದಾ ಸಿಂಗ್, ಸೋನಮ್ ಬಜ್ವಾ, ಸೌಂದರ್ಯ ಶರ್ಮಾ ಮತ್ತು ಚಂಕಿ ಪಾಂಡೆ ಸೇರಿದಂತೆ ಅದ್ಭುತ ತಾರಾಗಣವಿದೆ. 6, ಜೂನ್, 2025 ರಂದು ಈ ಚಿತ್ರ ತೆರೆ ಕಾಣಲಿದೆ.
ಹೌಸ್‌ಫುಲ್ 5
ಪ್ರೇಕ್ಷಕರ ಮೆಚ್ಚುಗೆ ಪಡೆದ ಕಾಮಿಡಿ ಹಾಗೂ ಕಾನೂನು ನಾಟಕ ಸರಣಿಯ ಪಾರ್ಟ್ 3ರ ಜಾಲಿ LLB 3 ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಕಾಣಿಸಿಕೊಳ್ಳಲಿದ್ದಾರೆ. ಸುಭಾಷ್ ಕಪೂರ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಮೃತಾ ರಾವ್, ಹುಮಾ ಖುರೇಷಿ, ಸೌರಭ್ ಶುಕ್ಲಾ ಮತ್ತು ಅನ್ನು ಕಪೂರ್ ನಟಿಸಿದ್ದಾರೆ. ಸ್ಟಾರ್ ಸ್ಟುಡಿಯೋಸ್ ನಿರ್ಮಿಸಿರುವ LLB 3 ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.
ಜಾಲಿ LLB 3
ಯಶ್ ರಾಜ್ ಫಿಲ್ಮ್ಸ್ ನ ಪತ್ತೇದಾರಿ ಕಥೆಯ ಮುಂದಿನ ಅಧ್ಯಾಯವಾದ ಆಲ್ಫಾದಲ್ಲಿ ಆಲಿಯಾ ಭಟ್ ಮತ್ತು ಶಾರ್ವರಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಈ ಚಿತ್ರದ ಟೀಂ ಇನ್ನೂ ರಹಸ್ಯವಾಗಿಯೇ ಇಟ್ಟಿದೆ. ಚಿತ್ರವು 25, ಡಿಸೆಂಬರ್, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಆಲ್ಫಾ