ಚೇತನ್ ನಿರ್ದೇಶನದಲ್ಲಿ ರಕ್ಷ್; ಬರ್ಮ ಚಿತ್ರದ ಪೋಸ್ಟರ್ ರಿಲೀಸ್

barma
Published on

ಬೆಂಗಳೂರು: ‘ಬಹದ್ದೂರ್’, ‘ಭರ್ಜರಿ’, ‘ಜೇಮ್ಸ್‌‘ ಖ್ಯಾತಿಯ ಚೇತನ್ ಹೊಸ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಶೀರ್ಷಿಕೆ ಘೋಷಣೆ ಮಾಡಿದ್ದಾರೆ.

ಸಂಸ್ಕೃತದಲ್ಲಿ ಬ್ರಹ್ಮ ವಾಸಿಸುವ ಜಾಗ ಎಂಬರ್ಥವಿರುವ ‘ಬರ್ಮ’ ಈ ಚಿತ್ರದ ಶೀರ್ಷಿಕೆ. ಇದರ ಜತೆಗೆ ‘ಆಯುಧ ಬಳಸುವುದು ಬರೀ ಆಡಂಬರ ಅಲ್ಲ, ಅದೊಂದು ಆಚರಣೆ’ ಎಂಬ ಅಡಿಬರಹವಿದೆ. ಪೋಸ್ಟರ್‌ನಲ್ಲಿ ‘ಈ ಚಿತ್ರದಲ್ಲಿ ನೀವು ಒಂದು ಭಾಗ’ ಎಂದು ಬರೆಯಲಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವಂತಿದೆ. ಇದೊಂದು ಆ್ಯಕ್ಷನ್ ಎಂಟರ್‌ಟೇನರ್ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ.

ಈ ಚಿತ್ರಕ್ಕೆ ಕಿರುತೆರೆ ನಟ ರಕ್ಷ್ ನಾಯಕನಾಗಿದ್ದು, ಮುಂದಿನ ತಿಂಗಳು ಶೂಟಿಂಗ್ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net