ಅಂಗವಿಕಲರಿಗೆ ಅನುಕಂಪದ ಬದಲು ಸೌಲಭ್ಯ ಕೊಡಿ; ಚೇತನ ನಾಜರೆ

15-RNR-03
Published on

ರಾಣೆಬೆನ್ನೂರ: ಅಂಗವಿಕಲ ಮಕ್ಕಳಿಗೆ ಅನುಕಂಪದ ಬದಲು ಒಳ್ಳೆಯ ಸೌಲಭ್ಯ ಒದಗಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಇದರಿಂದ ಅವರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ಹೋಟೆಲ್ ಉದ್ಯಮಿ ಚೇತನ ನಾಜರೆ ಹೇಳಿದರು.
77ನೇ ಸ್ವಾತಂತ್ರೃ ದಿನಾಚರಣೆ ನಿಮಿತ್ತ ಇಲ್ಲಿಯ ನರ್ತಕಿ ಹೋಟೆಲ್ ವತಿಯಿಂದ ನಗರದ ರೇಣುಕಾ ಯಲ್ಲಮ್ಮ ಕಿವುಡ ಮಕ್ಕಳ ಶಾಲೆಯ 130 ಮಕ್ಕಳಿಗೆ ಮಂಗಳವಾರ ಉಚಿತವಾಗಿ ಹಾಸಿಗೆ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅಂಗವಿಕಲ ಮಕ್ಕಳು ಸಹ ಅತ್ಯುತ್ತಮ ಸಾಧನೆಗೈದಿರುವ ಉದಾಹರಣೆಗಳು ಬಹಳಷ್ಟಿವೆ. ನಮ್ಮಿಂದ ಏನೂ ಮಾಡಲು ಆಗಲ್ಲ ಎನ್ನುವ ಬದಲು ನಮ್ಮಿಂದ ಎಲ್ಲವನ್ನು ಮಾಡಲು ಸಾಧ್ಯವಿದೆ ಎಂದುಕೊಂಡು ಮುನ್ನುಗ್ಗಬೇಕು. ಅಂದಾಗ ಅಂಗವಿಕಲ ಮಕ್ಕಳು ಉತ್ತಮ ಸಾಧನೆಗೈದು ಸಮಾಜದ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ಶಾಲೆಯ ಆಡಳಿತಾಧಿಕಾರಿ ಎಚ್.ಆರ್. ಶಿವಕುಮಾರ, ರಾಜು ಬಗಾಡೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net