

ಮಡಿಕೇರಿ: ಬಾಲ ವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರ, ಚೆಂಬು ಗ್ರಾಮದಲ್ಲಿ ಕ್ರೀಡೋತ್ಸ ಆನೆಹಳ್ಳದಲ್ಲಿ ಆಯೋಜಿಸಲಾಗಿತ್ತು.
ಚೆಂಬು ಗ್ರಾಮ ಪಂಚಾಯಿತಿನ ಸದಸ್ಯ ಗಿರೀಶ್ ಹೊಸೂರು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗೀತಾ ಶಿವರಾಮ ಕಾಚೇಲು, ದಿನೇಶ್ ಎಸ್.ಎನ್.ಸಣ್ಣಮನೆ, ಕೆ.ಎಸ್.ಪೊಡಿಯ, ಚಂದ್ರಶೇಖರ ಕಾಚೇಲು, ಕೆ.ಆರ್.ಸೋಮಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರದ ಅಧ್ಯಕ್ಷ ವನಿತಾ ವಿಜಯ ವಹಿಸಿದ್ದರು.
ಅಂಗನವಾಡಿ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು. ಹಾಗೆಯೇ ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಸ್ತೆ ಓಟ, ಹಗ್ಗ ಜಗ್ಗಾಟ, ಮೊಸರು ಕುಡಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶೀಲಾ ಅಶೋಕ, ರೇಣುಕಾ ಜಯರಾಮ, ಶೇ?ಪ್ಪ, ಮಕ್ಕಳ ದಿನಾಚರಣೆಯ ಗೌರವಾರ್ಥ ಪುಟಾಣಿ ನಿಧಿಶ್ರೀ ವೇದಿಕೆಯಲ್ಲಿದ್ದರು. ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ ಅಶ್ವಿನ್ ಕುಮಾರ್‌ಡಿವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ೩೨ ವ?ರ್ಗಳ ಕಾಲ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಆನೆಹಳ್ಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸರೋಜಿನಿ ಕೆ.ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.