ಕಳೆದ 7 ದಿನಗಳಲ್ಲಿ 11,000 ರೂ. ಕುಸಿತ! ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಹೀಗಿದೆ ಇಂದಿನ ದರ ಪಟ್ಟಿ | Gold Rates

gold
Published on

ನವದೆಹಲಿ: ದೀಪಾವಳಿ ಕಳೆಯುತ್ತಿದ್ದಂತೆ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ (Gold Rates) ಇಂದು ಖರೀದಿದಾರರಿಗೆ ಮತ್ತೆ ಶಾಕ್ ನೀಡಿದೆ. ಕೆಲವು ವಾರಗಳ ಹಿಂದೆ ಸಾರ್ವಕಾಲಿಕ ದಾಖಲೆ ಗರಿಷ್ಠ ಮಟ್ಟವನ್ನು ತಲುಪಿದ್ದ ಗೋಲ್ಡ್ ಬೆಲೆ ಇದೀಗ ಹಂತ ಹಂತವಾಗಿ ಕುಸಿಯುತ್ತಿದೆ. ಆದಾಗ್ಯೂ, ಕಳೆದ ಏಳು ದಿನಗಳಲ್ಲಿ 11,000 ರೂ. ಇಳಿಕೆಯಾಗಿದ್ದ ಚಿನ್ನ, ಇಂದು ಮತ್ತೆ ಏರಿಕೆಯತ್ತ ಮುಖಮಾಡಿದೆ.

ಶನಿವಾರ (ಅ.25) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಚಿನ್ನದ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,250 ರೂ. ಏರಿಕೆಯಾಗಿದ್ದರೆ, 22 ಕ್ಯಾರೆಟ್ ಬೆಲೆ 1150 ರೂ. ಜಾಸ್ತಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದಿದೆ. ಇದು ಔನ್ಸ್‌ಗೆ 16 ಡಾಲರ್​ನಷ್ಟು ಕಡಿಮೆಯಾಗಿದ್ದು, ಪ್ರಸ್ತುತ ಔನ್ಸ್‌ಗೆ 4,113 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಶನಿವಾರ ಬೆಳಿಗ್ಗೆ ದಾಖಲಾದ ಮಾಹಿತಿಯ ಪ್ರಕಾರ, ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

gold

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,25,770 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,300 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,25,620 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,150 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,25,620 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,15,150 ರೂ. ಆಗಿದೆ.

ಬೆಳ್ಳಿ ಬೆಲೆ ಸ್ಥಿರ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,55,000 ರೂ.ಗೆ ತಲುಪಿದೆ.
  • ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,55,000 ರೂ. ಇದೆ.
  • ಇನ್ನು ಹೈದರಾಬಾದ್‌, ತೆಲಂಗಾಣದಲ್ಲಿ ಪ್ರತಿ ಕೆಜಿ ಬೆಲೆ 1,70,000 ರೂ. ಆಗಿದೆ.

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net