

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ (Gold Rates) ಇದೀಗ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಗೋಲ್ಡ್ ಮತ್ತು ಬೆಳ್ಳಿ ಬೆಲೆಗಳು ಇಂದು (ಅ.18) ಕುಸಿದಿವೆ.
ಇಂದು ಬೆಳಗ್ಗೆ (ಶನಿವಾರ) ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನ 1,910 ರೂ. ಮತ್ತು 22 ಕ್ಯಾರೆಟ್ ಚಿನ್ನ 1,750 ರೂ. ಕುಸಿತ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕಡಿಮೆಯಾಗಿದೆ. ಒಂದು ಔನ್ಸ್ ಗೋಲ್ಡ್ ಬೆಲೆ 40 ಡಾಲರ್ ಇಳಿಕೆಯಾಗಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನ 4,249 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಮತ್ತೊಂದೆಡೆ, ಬೆಳ್ಳಿ ದರವೂ ಗಮನಾರ್ಹವಾಗಿ ಕುಸಿದಿದೆ. ಒಂದು ಕೆಜಿ ಬೆಳ್ಳಿ 13,000 ರೂ. ಇಳಿಕೆ. ಇದರೊಂದಿಗೆ, ಕಳೆದ ಮೂರು ದಿನಗಳಲ್ಲಿ ಒಂದು ಕೆಜಿ ಬೆಲೆ 17,000 ರೂ. ಕಡಿಮೆಯಾಗಿದೆ. ಇದು ನಿಜಕ್ಕೂ ಗಮನಾರ್ಹ.
ಇದನ್ನೂ ಓದಿ:
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.