

ನವದೆಹಲಿ: ದೀಪಾವಳಿ ಹಬ್ಬಕ್ಕೂ ಮೊದಲು ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ಹಬ್ಬ ಕಳೆಯುತ್ತಿದ್ದಂತೆ ದಿಢೀರ್ ಕುಸಿತ ಕಂಡಿದೆ (Gold Rates). ದೇಶದಲ್ಲಿ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿನ ಹೆಚ್ಚಳ ಕೆಲವು ದಿನಗಳಿಂದ ಇಳಿಕೆಯಾಗುತ್ತಿದೆ. ಇಂದು (ಅ.23) ಬೆಳಗ್ಗೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 810 ರೂ. ಇಳಿದಿದೆ.
ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 750 ರೂ. ಕಡಿಮೆಯಾಗಿ 1,14,650 ರೂ.ಗೆ ತಲುಪಿದೆ. ಇನ್ನು 18 ಕ್ಯಾರೆಟ್ ಬೆಲೆ 610 ರೂ. ಇಳಿಕೆಯಾಗಿ 93,810 ರೂ. ಆಗಿದೆ. ಚಿನ್ನದ ಬೆಲೆಗಳೊಂದಿಗೆ ಸಖತ್ ಪೈಪೋಟಿಗಿಳಿದಿರುವ ಬೆಳ್ಳಿ ದರ ಸಹ ಇಂದು ಕುಸಿದಿದೆ. ಇಂದಿನ ವಿವರಗಳ ಪ್ರಕಾರ, 1 ಕೆಜಿ ಬೆಳ್ಳಿಯ ಬೆಲೆಯಲ್ಲಿ 4,900 ರೂ. ಕಡಿಮೆಯಾಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.