

Gold Rates: ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದು ಚಿನ್ನದಂತ ಗ್ರಾಹರಕಲ್ಲೂ ಭಾರೀ ಖುಷಿ ಮೂಡಿಸಿತ್ತು. ಆದರೆ, ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ದಿಢೀರ್ ಏರಿಕೆಗೊಂಡಿದೆ. ಈ ಮೂಲಕ ಖರೀದಿದಾರರಿಗೆ ಮತ್ತೊಮ್ಮೆ ಬೇಸರ ಉಂಟಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಕುಸಿಯುತ್ತಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದ್ದು, ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ವಿವರಗಳ ಪ್ರಕಾರ, ಚಿನ್ನದ ಬೆಲೆ 700 ರೂ.ಗಳಷ್ಟು ಹೆಚ್ಚಾಗಿದೆ.
ನವದೆಹಲಿಯಲ್ಲಿ, 10 ಗ್ರಾಂ 22 ಕ್ಯಾರೆಟ್ ಬೆಲೆಯಲ್ಲಿ 700 ರೂ.ಗಳಷ್ಟು ಹೆಚ್ಚಾದ ಹಿನ್ನೆಲೆ 80,250 ರೂ.ಗಳಿಗೆ ತಲುಪಿದೆ. ಇನ್ನು 10 ಗ್ರಾಂ 24 ಕ್ಯಾರೆಟ್ ಬೆಲೆ 760 ರೂ.ಗಳಷ್ಟು ಹೆಚ್ಚಾಗಿ 87,530 ರೂ. ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80,100 ರೂ. ಇದೆ. ಅದೇ ರೀತಿ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,380 ರೂ. ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80,100 ರೂ. ತಲುಪಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,380 ರೂ. ತಲುಪಿದೆ.
ಹೈದರಾಬಾದ್‌ನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,07,000 ರೂ.
ವಿಜಯವಾಡದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,07,000 ರೂ.
ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,07,000 ರೂ.
ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 98,000 ರೂ.,(ಏಜೆನ್ಸೀಸ್).