ಚಿನ್ನದ ಬೆಲೆ ಮತ್ತೆ ಕುಸಿಯಿತೇ? ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Price

ವಿಜಯವಾಣಿ - 2025-03-02T094230.365
Published on

Gold Price: ಚಿನ್ನದ ಬೆಲೆಗಳು ಇದೀಗ ಆಕಾಶ ನೋಡುತ್ತಿವೆ ಎಂದು ಜನರು ಚಿನ್ನ ಖರೀದಿಯಿಂದ ಕೊಂಚ ದೂರ ಸರಿದಿದ್ದರು. ಆದರೆ, ಕಳೆದ ಎರಡು ದಿನಗಳಲ್ಲಿ ದರದಲ್ಲಿ ದಿಢೀರ್​ 1,100 ಮತ್ತು 500 ರೂ. ಇಳಿಕೆ ಕಂಡುಬಂದಿದ್ದು, ಗೋಲ್ಡ್​ ಪ್ರಿಯರು ಮತ್ತೆ ಚಿನ್ನದತ್ತ ಮುಖಮಾಡುವಂತೆ ಮಾಡಿದೆ. ನಾಲ್ಕು ದಿನಗಳಿಂದ ಚಿನ್ನದ ಬೆಲೆ ಸರಣಿ ಕುಸಿತ ಕಾಣುತ್ತಿದೆ. ಸದ್ಯ ಇದು ಗ್ರಾಹಕರ ಖುಷಿಗೆ ಕಾರಣವಾಗಿದೆ.

ಮತ್ತಷ್ಟು ಇಳಿಕೆ?

ಮಾರ್ಚ್ 4ರಂದು ಮೆಕ್ಸಿಕನ್ ಮತ್ತು ಕೆನಡಾದ ಉತ್ಪನ್ನಗಳ ಮೇಲಿನ ಸುಂಕಗಳು ಹೆಚ್ಚಾಗಲಿವೆ ಎಂದು ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅಮೆರಿಕದಲ್ಲಿ ಹಣದುಬ್ಬರ ದರವು ಗರಿಷ್ಠ ಮಟ್ಟವನ್ನು ತಲುಪಬಹುದು ಎಂಬ ವರದಿಗಳಿವೆ. ಇದರೊಂದಿಗೆ, ಯುಎಸ್ ಫೆಡರಲ್ ರಿಸರ್ವ್ (ಯುಎಸ್ ಫೆಡ್) ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಗಳು ಹೊರಹೊಮ್ಮುತ್ತಿವೆ. ಮುಂಬರುವ ದಿನಗಳಲ್ಲಿ ಚಿನ್ನದ ದರಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೆಲವು ತಜ್ಞರು ಹೇಳಿದ್ದಾರೆ. ಮತ್ತೊಂದೆಡೆ, ತಜ್ಞರು ಚಿನ್ನದ ಬೆಲೆಯಲ್ಲಿನ ಕುಸಿತ ತಾತ್ಕಾಲಿಕ ಎಂದು ಸೂಚಿಸಿರುವುದು ಗಮನಾರ್ಹ.

ಇಂದು ಸ್ಥಿರ

ಇಂದು (ಮಾ.02) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಚಿನ್ನದ ಬೆಲೆ ಸ್ಥಿರವಾಗಿದೆ. ಇದರೊಂದಿಗೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 86,620 ರೂ. ಇದೆ. 22 ಕ್ಯಾರೆಟ್ ಚಿನ್ನದ ದರ 79,400 ರೂ. ಉಳಿದಿದೆ. ಆದಾಗ್ಯೂ, ಮಾರ್ಚ್ ತಿಂಗಳಲ್ಲಿ ಚಿನ್ನದ ದರ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಏತನ್ಮಧ್ಯೆ, ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಾಗಿದ್ರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂಬುದರ ವಿವರ ಇಲ್ಲಿ ತಿಳಿಯೋಣ.

ದೇಶವ್ಯಾಪಿ ಇಂದಿನ ಚಿನ್ನದ ದರ

  • ದೆಹಲಿಯಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 79,550 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 86,770 ರೂ. ಇದೆ.
  • ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 79,400 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 86,620 ರೂ. ಆಗಿದೆ.

ಹೀಗಿದೆ ಬೆಳ್ಳಿ ಬೆಲೆ

  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,05,000 ರೂ. ಇದೆ.
  • ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 3,000 ರೂ. ಕಡಿಮೆಯಾಗಿದೆ. ಇದರೊಂದಿಗೆ, ಈ ನಗರಗಳಲ್ಲಿ ಕೆಜಿಯ ಬೆಲೆ 97,000 ರೂ. ಇದೆ.
  • ಇನ್ನು ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಗೆ 1,05,000 ರೂ. ಇದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net