ಬಾಲ್ಯ ವಿವಾಹ ಹುಡುಗರ ವಯಸ್ಸಿನ ಬಗ್ಗೆ ಪರಿಶೀಲನೆ

8-678a9eba3ddc2
Published on

ನವದೆಹಲಿ: ಬಾಲ್ಯವಿವಾಹ ನಿಷೇಧ ಕಾಯ್ದೆಯು ಬಾಲ್ಯವಿವಾಹವನ್ನು ಅನೂರ್ಜಿತಗೊಳಿಸುವುದಿಲ್ಲ. ಆದರೆ ಯಾವುದೇ ಅಪ್ರಾಪ್ತ ಸಂಗಾತಿಯು ವಯಸ್ಕ ಆಗುವ ಎರಡು ವರ್ಷಗಳಲ್ಲಿ ವಿವಾಹವನ್ನು ರದ್ದುಗೊಳಿಸಬಹುದು ಎಂದು ತಿಳಿಸುತ್ತದೆ. ಈ ಕಾನೂನಿನಡಿಯಲ್ಲಿ, ಬಾಲಕಿ ಅಥವಾ ಆಕೆಯ ಹಿತೈಷಿಗಳು ಆಯ್ಕೆಮಾಡಿದರೆ, 20 ವರ್ಷ ವಯಸ್ಸಿನವರೆಗೆ ಆಕೆಯ ಮದುವೆಯನ್ನು ಪ್ರಶ್ನಿಸಬಹುದು. 18 ವರ್ಷ ತುಂಬಿದ ನಂತರ ಆಕೆಯನ್ನು ಪ್ರಾಪ್ತ ಮತ್ತು ವಿವಾಹಿತೆ ಎಂದು ಪರಿಗಣಿಸಲಾಗುತ್ತದೆ.

ಆದರೆ ಪುರುಷ ಅಪ್ರಾಪ್ತ ವಯಸ್ಕನ ವಿಷಯದಲ್ಲಿ ಗಂಭೀರ ಸಮಸ್ಯೆ ಇದೆ. ಏಕೆಂದರೆ ಆಗ ಅವನು ವಯಸ್ಕ ಪರಿಗಣಿಸುವ ಮತ್ತು ವಿವಾಹಕ್ಕೆ ಅರ್ಹನಾಗುವ ವಯಸ್ಸಿನ ನಡುವೆ 18 ಮತ್ತು 21) ವ್ಯತ್ಯಾಸವಿದೆ ಎಂದು ಸುಪ್ರೀಂಕೋರ್ಟ್ ಗಮನಿಸಿದೆ. ಈ ಹಿನ್ನೆಲೆಯಲ್ಲಿ, ಈ ಕಾಯ್ದೆಯಡಿ ಬಾಲಕರು ವಯಸ್ಕರಾಗುವ ವಯಸ್ಸು 21 ವರ್ಷ ಎಂದು ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಮನವಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಆಕೆಯ ಪತಿಯ ಮನವಿಯ ಮೇರೆಗೆ ಪುತ್ರನ ಮದುವೆಯನ್ನು ಕೋರ್ಟ್ ರದ್ದುಗೊಳಿಸಿದೆ. ಮದುವೆ ರದ್ದಾದಾಗ ಆತನ ವಯಸ್ಸು 23 ಆಗಿತ್ತು. ಮಹಿಳೆಯ ಅರ್ಜಿ ಕುರಿತು ಸಂಬಂಧಪಟ್ಟವರಿಗೆ ಸುಪ್ರೀಂಕೋರ್ಟ್ ನೊಟೀಸ್ ಜಾರಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net