

ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಆರಂಭವಾಗಿ 13ನೇ ವಾರಕ್ಕೆ ಕಾಲಿಟ್ಟಿದ್ದು, ವಾರ ಕಳೆದಂತೆ ಕಾರ್ಯಕ್ರಮ ರೋಚಕತೆ ಹೆಚ್ಚಿಸುತ್ತಲೇ ಹೋಗುತ್ತಿದೆ. ಇನ್ಣೂ ಈ ವಾರದ ಟಾಸ್ಕ್ ವಿಚಾರಕ್ಕೆ ಬರುವುದಾದರೆ ಬಿಗ್ಬಾಸ್ ಮನೆಯನ್ನು ರೆಸಾರ್ಟ್ ಆಗಿ ಪರಿವರ್ತಿಸಲಾಗಿದ್ದು, ಈ ಟಾಸ್ಕ್ನಲ್ಲಿ ಭವ್ಯಾ ಅವರ ತಂಡ ಗೆದ್ದು ಕ್ಯಾಪ್ಟನ್ಸಿಗೆ ಅರ್ಹತೆ ಪಡೆದಿದೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಗೆದ್ದಿದ್ದು, ಸತತ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನೂ ಕ್ಯಾಪ್ಟನ್ಸಿ ಟಾಸ್ಕ್ಗೆ ಸಂಬಂಧಿಸಿದಂತೆ ಭವ್ಯಾ ಅವರು ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಮೋಕ್ಷಿತಾ ಹಾಗೂ ಮನೆಯ ಇತರೆ ಸದಸ್ಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಆಟದಲ್ಲಿ ಮೋಸ ಮಾಡಿದ್ರಾ ಭವ್ಯಾ? ಎಂಬ ಶೀರ್ಷಿಕೆಯಡಿ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಭವ್ಯಾ ಅವರ ಮೇಲೆ ಮಾಡಲಾಗಿರುವ ನಿಜಾನಾ ಎಂಬುದು ವಾರಾಂತ್ಯದಲ್ಲಿ ಸುದೀಪ್ ಅವರು ನಡೆಸಿಕೊಡುವ ಕಿಚ್ಚನ ಪಂಚಾಯಿತಿಯಲ್ಲಿ ನಿರ್ಧಾರವಾಗಲಿದೆ.
ಕ್ಯಾಪ್ಟನ್ಸಿ ಟಾಸ್ಕ್ ವಿಚಾರಕ್ಕೆ ಬರುವುದಾದರೆ ಬಿಗ್ಬಾಸ್ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕೊಟ್ಟಿದ್ದಾರೆ. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಅದರಂತೆ ಸ್ಫರ್ಧಿಗಳು ಓಡಿ ಹೋಗಿ ಬಿಗ್ಬಾಸ್ ಹೇಳಿದ ನಂಬರ್ನಲ್ಲಿರೋ ಚೆಂಡುಗಳನ್ನು ತೆಗೆದುಕೊಂಡು ಬುಟ್ಟಿಗೆ ಹಾಕಬೇಕಿತ್ತು. ಹೀಗೆ ಐದು ಸ್ಪರ್ಧಿಗಳು ಓಡುತ್ತಾ, ಜಾರಿ ಬಿಳುತ್ತಾ ಬಾಲ್ ಅನ್ನು ಹಿಡಿದು ಬುಟ್ಟಿಗೆ ಹಾಕಿದ್ದಾರೆ. ಆದರೆ ಭವ್ಯಾ ಗೌಡ ಬೇರೆ ನಂಬರ್ನಿಂದ ಬಿದ್ದ ಬಾಲ್ ಅನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿದ್ದಾರೆ.
ಈ ಅಂಶವನ್ನು ಗಮನಿಸಿದ ಮೋಕ್ಷಿತಾ, ಮಂಜು ಹಾಗೂ ರಜತ್ ಈ ಬಗ್ಗೆ ಮಾತನಾಡಿದ್ದು, ಭವ್ಯಾ ಅವರು ಮೋಸ ಮಾಡಿರುವ ಬಗ್ಗೆ ಧ್ವನಿ ಎತ್ತಿದ್ದಾರೆ. ಇದನ್ನೂ ಖುದ್ದು ನೋಡಿದ ರಜತ್ಗೆ ಭವ್ಯಾ ಗೌಡ ಸುಮ್ಮನೆ ಇರು ಅಂತ ಹೇಳಿದ್ರು ಎಂದು ಮಾತನಾಡುವ ವೇಳೆ ಮೋಸದಾಟದ ವಿಚಾರ ಹೊರಗೆ ಬಿದ್ದಿದೆ. ಸದ್ಯ ಈ ಪ್ರೋಮೋ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ. ವಾರಾಂತ್ಯದಲ್ಲಿ ನಿರೂಪಕ ಸುದೀಪ್ ಈ ವಿಚಾರವನ್ನು ಯಾವ ರೀತಿ ಪ್ರಸ್ತಾಪಾ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.