ಚನ್ನೇಶ್ವರ ಮಠದಲ್ಲಿ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ನ. 27ರಂದು

je721538035802367-abc
Published on

ರಾಣೆಬೆನ್ನೂರ: ಇಲ್ಲಿನ ಮೃತ್ಯುಂಜಯ ನಗರದ ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ನ. 27ರಂದು ಸಂಜೆ 6ಕ್ಕೆ ನಗರದ ಶ್ರೀ ಚೆನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ರಂಭಾಪುರಿ ಪೀಠದ ಲಿಂ. ಜಗದ್ಗುರು ವೀರ ಗಂಗಾಧರ ಶಿವಾಚಾರ್ಯರ ಸಂಸ್ಮರಣೋತ್ಸವ ಏರ್ಪಡಿಸಲಾಗಿದೆ.
ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅತಿಥಿಯಾಗಿ ಪಾಲ್ಗೊಳ್ಳುವರು. ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಶಿವಾಚಾರ್ಯರ ಕುರಿತು ಹೊನ್ನಾಳಿಯ ನಿವೃತ್ತ ಪ್ರಾಚಾರ್ಯ ಯು.ಎನ್. ಸಂಗನಾಳಮಠ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net