ಚನ್ನಪಟ್ಟಣ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಲ್ಯಾಬ್‌ನಲ್ಲಿ 2ನೇ ಬಾರಿ ಕಳ್ಳತನ

Channapatna Government Polytechnic College
Published on

ಬೆಂಗಳೂರು : ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿವಿಧ ಬಗೆಯ ಎಲೆಕ್ಟ್ರಿಕಲ್ ಮೆಷಿನ್‌ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಿ. ಅರುಣಾ, ಚನ್ನಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜುಲೈ 4 ರಾತ್ರಿ ಕಾಲೇಜಿನ ಲ್ಯಾಬ್ ಕೊಠಡಿ ಬೀಗವನ್ನು ಮುರಿದು ನುಗ್ಗಿರುವ ಕಳ್ಳರು, ಎರಡು 3 ಪೇಸ್ ಒನ್ ಎಚ್‌ಪಿ ಇಂಡಕ್ಷನ್ ಮೋಟಾರ್, 1 ಪೇಸ್ 1ಎಚ್‌ಪಿ ಇಂಡಕ್ಷನ್ ಮೋಟಾರ್, ಎರಡು 3ಪೇಸ್ ಡಾಲ್ ಸ್ಪಾಟರ್ಸ್ ಮತ್ತು ವೈಯರ್‌ಗಳನ್ನು ಕತ್ತರಿಸಿ ಕಳ್ಳತನ ಮಾಡಿದ್ದಾರೆ.

ಈ ಹಿಂದೆಯೂ ಸಹ ಇದೇ ಲ್ಯಾಬ್‌ನಲ್ಲಿ 1 ಪೇಸ್ ಎಚ್‌ಪಿ ಇಂಡಕ್ಷನ್ ಮೋಟಾರ್, ಎಲ್ಮಾಟ್ ಎಸಿ ಕಾಮುಕೇಟರ್ ಮೋಟಾರ್ ಕಳ್ಳತನ ಆಗಿದ್ದವು. ಇದೀಗ 2ನೇ ಬಾರಿ ಕಾಲೇಜಿನ ಲ್ಯಾಬ್ ಕಳ್ಳತನ ಆಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net