ಜಗನ್​​ರ​ನ್ನು ಡ್ರಗ್ ಲಾರ್ಡ್ ಪಾಬ್ಲೋ ಎಸ್ಕೋಬಾರ್​​ಗೆ ಹೋಲಿಸಿದ ಸಿಎಂ; ಹೇಳಿದ್ದೇನು ಗೊತ್ತಾ?

Untitled-design-84-1
Published on

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ(ಜುಲೈ 25) ವೈಎಸ್‌ಆರ್‌ಸಿಪಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಕೊಲಂಬಿಯಾದ ನಾರ್ಕೋ ಭಯೋತ್ಪಾದಕ ಪಾಬ್ಲೊ ಎಸ್ಕೋಬಾರ್‌ಗೆ ಹೋಲಿಸಿದ್ದಾರೆ.

ವಿಧಾನಸಭೆಯಲ್ಲಿ ಶ್ವೇತಪತ್ರ ಬಿಡುಗಡೆ ಮಾಡಿದ ನಾಯ್ಡು, ನಾನು ದೇಶದ ಅತ್ಯಂತ ಹಿರಿಯ ರಾಜಕಾರಣಿ. ಜಗನ್ ಅಧಿಕಾರದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ಇದ್ದಂತಹ ಪರಿಸ್ಥಿತಿಯನ್ನು ನಾನು ಹಿಂದೆಂದೂ ನೋಡಿಲ್ಲ. ಅವರ ಆಳ್ವಿಕೆಯಲ್ಲಿ ಆಂಧ್ರಪ್ರದೇಶವು ಗಾಂಜಾ ರಾಜಧಾನಿಯಾಯಿತು. ಅವರ ಆಳ್ವಿಕೆ ಸಮಯವನ್ನು ಹೋಲಿಸಲು ಡ್ರಗ್ ಲಾರ್ಡ್ ಪಾಬ್ಲೋ ಎಸ್ಕೋಬಾರ್‌ ಒಬ್ಬರೇ ಇದ್ದಾರೆ ಎಂದು ಹೇಳಿದರು.

ಪಾಬ್ಲೋ ಎಸ್ಕೋಬಾರ್ ಕೊಲಂಬಿಯಾದ ಡ್ರಗ್ ಲಾರ್ಡ್ ಆಗಿದ್ದರು. ಅವರು ನಾರ್ಕೋ-ಭಯೋತ್ಪಾದಕರಾಗಿದ್ದರು. ಬಳಿಕ ರಾಜಕೀಯಕ್ಕೆ ಬಂದು ರಾಜಕಾರಣಿಯಾದರು. ನಂತರ ಡ್ರಗ್ಸ್ ಮಾರಾಟ ಮಾಡಲು ತಮ್ಮದೇ ಆದ ಗ್ಯಾಂಗ್ ಅನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು 30 ಬಿಲಿಯನ್ ಡಾಲರ್ ಗಳಿಸಿದರು. ಅವರನ್ನು 1976ರಲ್ಲಿ ಬಂಧಿಸಲಾಯಿತು. 1980ರಲ್ಲಿ ಅವರು ಡ್ರಗ್ಸ್ ಮಾರಾಟ ಮಾಡುವ ಮೂಲಕ ವಿಶ್ವದ ನಂಬರ್ ಒನ್ ಶ್ರೀಮಂತ ಆದರು ಎಂದು ಹೇಳಿದರು.

ಕೆಲವರಿಗೆ ಅಗತ್ಯಗಳಿರುತ್ತವೆ, ಕೆಲವರಿಗೆ ದುರಾಶೆ ಇರುತ್ತದೆ ಮತ್ತು ಕೆಲವರಿಗೆ ಉನ್ಮಾದವಿದೆ. ಉನ್ಮಾದವಿರುವ ಹುಚ್ಚರು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ (ವೈಎಸ್ ಜಗನ್) ಅವರ ಉದ್ದೇಶವೇನು? ಟಾಟಾ, ರಿಲಯನ್ಸ್, ಅಂಬಾನಿ ಬಳಿ ಹಣವಿದೆ. ಅವರಿಗಿಂತ ಶ್ರೀಮಂತನಾಗಲು ಅವರು ಹಾತೊರೆಯುತ್ತಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಯಾವ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಇತ್ತು ಎಂಬುದನ್ನು ನೀವು ನೋಡಿದ್ದೀರಿ. ಆಂಧ್ರಪ್ರದೇಶವು ಗಾಂಜಾ ರಾಜಧಾನಿಯಾಗಿತ್ತು ಎಂದು ಹೇಳಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net