

ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ಗಾಗಿ ಬೆಂಗಳೂರಿನ ಕೌಟುಂಬಿಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಇವರು ಪರಿಚಿತರಾಗಿ ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಬಳಿಕ ವಿವಾಹವಾಗಿದ್ದರು. ಇದೀಗ ಇಬ್ಬರೂ ಡಿವೋರ್ಸ್ ನೀಡಿದ್ದಾರೆ.
ಗುರುವಾರದವರೆಗೂ ಗಂಡ-ಹೆಂಡ್ತಿಯಾಗಿದ್ದ ಜೋಡಿ ಇಂದಿ ನೀನ್ಯಾರೋ? ನಾನ್ಯಾರೋ? ಅಂತಿದ್ದಾರೆ. ಅದಕ್ಕೂ ಜನರಿಗೆ ಕಾಡ್ತಾ ಇಎಉವ ಪ್ರಶ್ನೆ ಅಂದ್ರೆ ಒಂದೇ ದಿನದಲ್ಲಿ ಡಿವೋರ್ಸ್ ಸಿಕ್ಕಿ ಬಿಡುತ್ತಾ ಅದು ಹೇಗೆ ಸಾಧ್ಯ ಅನ್ನೋದು. ಯಸ್, ಈ ಜೋಡಿಗೆ ಒಂದೇ ದಿನದಲ್ಲಿ ವಿಚ್ಛೇದನ ಸಿಕ್ಕಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ಹಾಕಿದ್ದ ಈ ಜೋಡಿಗೆ ಶುಕ್ರವಾರ ವಿಚ್ಛೇದನ ಸಿಕ್ಕಿದೆ. ಈ ಸುದ್ದಿ ನೋಡಿ ಕೆಲವರು ಇವರು ವಿಚ್ಛೇದನ ಪಡೆದಿದ್ದೇ ಸುಳ್ಳು ಎಂದು ಕಾಮೆಂಟ್ಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಮಾಡೋಕೆ ಪ್ರಾರಂಭಿಸಿದ್ದಾರೆ.
ಇವರಿಬ್ಬರೂ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸುದ್ದಿ ಹಂಚಿಕೊಂಡಾಗ ಖಚಿತವಾಗಿತ್ತು. ಆದರೆ, ಒಂದೇ ದಿನದಲ್ಲಿ ಇವರಿಗೆ ವಿಚ್ಛೇದನ ಸಿಕ್ಕಿದ್ದು ಹೇಗೆ ಎನ್ನುವುದಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಇದಕ್ಕೆ ಕಾರಣವಾಗಿದ್ದು, ಫ್ಯಾಮಿಲಿ ಕೋರ್ಟ್‌ನ 13ಬಿ ಸೆಕ್ಷನ್.
13 ಬಿ ಸೆಕ್ಷನ್ ಎಂದರೇನು?
ಗಂಡ-ಹೆಂಡತಿಗೆ ಜತೆಯಾಗಿ ಬದುಕಲು ಕಷ್ಟವಾಗುತ್ತಿದೆ ಎಂದಾಗ ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ವಿಚ್ಛೇದನ ಪಡೆಯುವ ಮಾರ್ಗ ಇದು. ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13ಬಿಯು ಫ್ಯಾಮಿಲಿ ಕೋರ್ಟ್‌ನಲ್ಲಿ ದಂಪರಿಗಳಿಗೆ ಸಮ್ಮತಿಯ ಒಪ್ಪಿಗೆ ನೀಡಿ ಡಿವೋರ್ಸ್ ಪಡೆಯಲು ಅವಕಾಶ ದಯಪಾಲಿಸುತ್ತದೆ. ಇದಕ್ಕಾಗಿ ಗಂಡ-ಹೆಂಡತಿ ಇಬ್ಬರೂ ಮ್ಯೂಚುವಲ್ ಕನ್ಸೆಂಟ್ ಅಂದರೆ ಶಾಂತಿಯುತ ಪ್ರತ್ಯೇಕತೆಗೆ ಒಪ್ಪಿಗೆ ನೀಡುವ ಅಗ್ರಿಮೆಂಟ್‌ಅನ್ನು ಕೋರ್ಟ್‌ಗೆ ನೀಡಬೇಕು. 1976ರ ಮೇ 27 ರಂದು ಹಿಂದೂ ವಿವಾಹ ಕಾಯಿದೆಯಲ್ಲಿ ಈ ನಿಬಂಧನೆಯನ್ನು ಸೇರಿಸಲಾಗಿದೆ. ಹಾಗಂತ ಈ ಕನ್ಸೆಂಟ್ ಫಾರ್ಮ್‌ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಬೇಕಾದಲ್ಲಿ ಎರಡೂ ಕಡೆಯವರು ಕೆಲವೊಂದು ಷರತ್ತುಗಳನ್ನು ಪಾಲನೆ ಮಾಡಬೇಕಾಗುತ್ತದೆ. ಇಬ್ಬರೂ ಕೂಡ ಕಳೆದೊಂದು ವರ್ಷದಿಂದ ಒಟ್ಟಿಗೆ ವಾಸ ಮಾಡುತ್ತಿರುವ ಮಾಹಿತಿ ನೀಡಬೇಕು. ಮದುವೆ ಮುರಿಯುವ ಮಾತಿಗೆ ಇಬ್ಬರದೂ ಬೇಷರತ್ ಒಪ್ಪಿಗೆ ಇರಬೇಕು. ತೀರಾ ಕೆಲವೊಂದು ಸಂದರ್ಭದಲ್ಲಿ ಮಾತ್ರವೇ 1 ವರ್ಷ ಒಟ್ಟಿಗೆ ಬಾಳುವ ಕ್ಲಾಸ್‌ಅನ್ನು ಕೋರ್ಟ್ ತೆಗೆದುಹಾಕುತ್ತದೆ. ಇನ್ನೂ ಕೆಲವೊಂದು ಷರತ್ತಿನಲ್ಲಿ ತುರ್ತು ವಿಚ್ಛೇದನ ಸಿಗುತ್ತದೆ. ಆದರೆ, 13 ಬಿ ಸೆಕ್ಷನ್‌ನಲ್ಲಿ ವಿಚ್ಛೇದನ ಪಡೆಯಲು ಚಂದನ್ ಹಾಗೂ ನಿವೇದಿತಾ ಏನು ಕಾರಣ ನೀಡಿದ್ದಾರೆ ಅನ್ನೋದು ಸ್ಪಷ್ಟವಿಲ್ಲ.
ಟಿಕ್‌ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಈಗ ಜಿಎಸ್‌ಟಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಜಿಎಸ್‌ಟಿ ಸಿನಿಮಾದಲ್ಲಿ ಸೃಜನ್ ಲೋಕೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಸೃಜನ್‌ಗೆ ನಾಯಕಿಯಾಗಿ ಬಿಗ್‌ಬಾಸ್ ಗೊಂಬೆ ನಿವೇದಿತಾ ಗೌಡ ನಟಿಸುತ್ತಿದ್ದಾರೆ.