ಚಾಣಾಕ್ಯ ವಿಶ್ವವಿದ್ಯಾಳಯದ ಸ್ಕೂಲ್ ಆ್ ಬಯೋಸೈನ್ಸ್ ಆರಂಭ: ಈ ಕೋರ್ಸ್‌ನಿಂದ ಏನೆಲ್ಲ ಉಪಯೋಗಗಳಿವೆ?

chanakya Bioscience
Published on

ಬೆಂಗಳೂರು ಆರೋಗ್ಯ ರಕ್ಷಣೆ, ಪರಿಸರ ಸುಸ್ಥಿರತೆಗೆ ಸವಾಲುಗಳು ಸಮರ್ಥವಾಗಿ ಎದುರಿಸುವುದು ಸೇರಿ ಮುಂದಿನ ಪೀಳಿಗೆಯ ಚಿಂತನೆಯ ನಾಯಕರನ್ನು ಸಶಕ್ತಗೊಳಿಸಲು ಸ್ಕೂಲ್ ಆ್ ಬಯೋಸೈನ್ಸ್ ಆರಂಭವು ದಿಟ್ಟ ಹೆಜ್ಜೆಯಾಗಿದೆ ಎಂದು ಚಾಣಕ್ಯ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರೂ ಆಗಿರುವ ಬಯೋಕಾನ್ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್ ಶಾ ಹೇಳಿದರು,

ಚಾಣಕ್ಯ ವಿಶ್ವವಿದ್ಯಾಲಯವು ಆರಂಭಿಸಿರುವ ಸ್ಕೂಲ್ ಆ್ ಬಯೋಸೈನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಮ-ಅಕಾಡೆಮಿಯಾ ಸಹಯೋಗದಲ್ಲಿ ಒಂದು ಹೆಗ್ಗುರುತಾಗಿದೆ. ಕೈಗಾರಿಕೆಗಳು ಮತ್ತು ಉದ್ಯಮದ ಪ್ರವೃತ್ತಿಗಳಿಗೆ ಅನುಗುಣವಾಗಿರಲು ಶೈಕ್ಷಣಿಕ ಜ್ಞಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸ್ಕೂಲ್ ಆ್ ಬಯೋಸೈನ್ಸ್ ಅನ್ನು ಶ್ರೇಷ್ಠತೆಯ ಕೇಂದ್ರವಾಗಿ ರೂಪಿಸುತ್ತೇವೆ. ಅದ್ಭುತ ಸಂಶೋಧನೆ ಮತ್ತು ನಾವೀನ್ಯತೆಯು ಅಭಿವೃದ್ಧಿ ಹೊಂದಲಿದೆ. ಸುಧಾರಿತ ಉಪಕರಣಗಳು ಮತ್ತು ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ, ಹೊಸದಾಗಿ ಉದ್ಘಾಟನೆಗೊಂಡ ಕೇಂದ್ರದಲ್ಲಿ ಬಯೋಸೈನ್ಸ್ ಲ್ಯಾಬ್ ಜೀನೋಮಿಕ್ಸ್, ಬಯೋ ಇಂಜಿನಿಯರಿಂಗ್, ಡೀಸೆಲ್ ಬಯಾಲಜಿ, ಕಂಪ್ಯೂಟೇಶನಲ್ ಬಯಾಲಜಿ ಸೇರಿ ಸಂಶೋಧನಾ ಚಟುವಟಿಕೆಗಳ ವ್ಯಾಪಕ ಶ್ರೇಣಿಯನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದರು.

ಆರೋಗ್ಯ, ಕೃಷಿ ಮತ್ತು ಪರಿಸರ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ವಿವಿಧ ಹಿನ್ನೆಲೆಯ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಅಂತರಶಿಸ್ತೀಯ ಸಹಯೋಗಕ್ಕಾಗಿ ಇದು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿ ಕುಲಾಧಿಪತಿ ಪ್ರೊ.ಎಂ.ಕೆ. ಶ್ರೀಧರ್, ಸಹ ಕುಲಾಧಿಪತಿ ಎಂ.ಪಿ. ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net