

ಹನೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಿದ ಮಹಾನ್ ನಾಯಕ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್‌ಕುಮಾರ್ ಬಣ್ಣಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೂಲ ಆಧಾರ ಸ್ತಂಭ ಸಂವಿಧಾನ. ಇದರ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಸಂವಿಧಾನ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹಾಗೆಯೇ ಸಂವಿಧಾನವನ್ನೂ ಗೌರವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ಪಪಂ ಸದಸ್ಯರಾದ ಸುದೇಶ್, ಗಿರೀಶ್, ಮಹದೇವನಾಯ್ಕ, ಪವಿತ್ರಾ, ಸೋಮಶೇಖರ್, ಮಹೇಶ್, ಸಂಪತ್‌ಕುಮಾರ್, ನೌಕರರಾದ ಮಾದೇಶ್, ಪ್ರತಾಪ್, ಮದನ್‌ಕುಮಾರ್, ಶ್ರೀನಿವಾಸ್, ಸುನೀಲ್, ಶರತ್, ರಾಕೇಶ್ ಇದ್ದರು.