ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳಿ

21raju1
Published on


ಚಾಮರಾಜನಗರ:ಮಹಿಳೆಯರು ಸಂಘಟನೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ಸಂತೋಷದಿಂದ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಡಿವೈಎಸ್ಪಿ ಪ್ರಿಯಾದರ್ಶಿನಿ ಸಾಣೆಕೊಪ್ಪ ತಿಳಿಸಿದರು.

ನಗರದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2023-24ನೇ ಸಾಲಿನ ಇನ್ನರ್‌ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ಪೂಜಾ ಸುಭಾಷ್ ಕಾರ್ಯದರ್ಶಿ ಚಿತ್ರಾ ಸುರೇಶ್ ಮತ್ತು ತಂಡದವರ ಪದವಿ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಎಂಬ ಕೀಳರಿಮೆಯನ್ನು ಮೊದಲು ಬಿಡಬೇಕು. ಯಾರನ್ನೋ ಮೆಚ್ಚಿಸುವುದಕ್ಕೆ ಬದುಕು ಕಾಲ ದೂರ ಆಗಿದೆ. ನಮ್ಮ ಆತ್ಮತೃಪ್ತಿ ಹಾಗೂ ಸಂತೋಷಕ್ಕಾಗಿ ಜೀವನ ರೂಪಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹಾಗೂ ಅತ್ಮವಿಶ್ವಾಸ ನಿಮ್ಮಲಿರಬೇಕು. ಸದಾ ಲವಲವಿಕೆಯಿಂದ ನಮ್ಮನ್ನು ನಾನೇ ಉತ್ಸಾಹವನ್ನು ತಂದುಕೊಂಡು ಸುಂದರವಾದ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. ನಾವು ಯಾರೂದೋ ಸಂತೋಷಕ್ಕೆ ನಮ್ಮ ಜೀವನವನ್ನು ಬಲಿಕೊಟ್ಟು ಸಂತೋಷ ಪಡುವುದು ಯಾವ ನ್ಯಾಯ. ಹೀಗಾಗಿ ತಾವೆಲ್ಲೂರ ಇನ್ನೀರ್ ವೀಲ್ ಸಂಸ್ಥೆಯನ್ನು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುವ ಮನೋಭಾವನೆಯನ್ನು ಹೊಂದಿದ್ದೀರಿ. ಬಡವರಿಗೆ ಸೇವೆ ತಲುಪುವ ನಿಟ್ಟಿನಲ್ಲಿ ನಿಮೆಲ್ಲರ ಕಾರ್ಯಕ್ರಮಗಳು ನಡೆಯಲಿದೆ ಎಂದು ಶುಭ ಕೋರಿದರು.

ಇನ್ನರ್ ವೀಲ್ ನೂತನ ಅಧ್ಯಕ್ಷೆ ಪೂಜಾ ಸುಭಾಷ್ ಮಾತನಾಡಿ, ಹೆಣ್ಣು ಸಮಾಜದ ಕಣ್ಣು ಎನ್ನುತ್ತಾರೆ. ಅದರೂ ಇನ್ನು ಸಹ ಹೆಣ್ಣಿಗೆ ದೊರೆಯಬೇಕಾದ ಸೂಕ್ತ ಸ್ಥಾನ ಮಾನಗಳು ಲಭಿಸುತ್ತಿಲ್ಲ. ಇನ್ನಿಲ್ ವೀಲ್ ವತಿಯಿಂದ ನೊಂದ ಮಹಿಳೆಯರ ಸಬಲೀಕರಣ ಹಾಗು ಸೇವೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರು ಮಹಿಳಾ ಸಬಲೀಕರಣಕ್ಕಾಗಿ ದುಡಿಯೋಣ ಎಂದರು.

ಇನ್ನರ್ ವೀಲ್ ವತಿಯಿಂದ ಮಹಿಳಾ ಸಬಲೀಕಣ, ಶೈಕ್ಷಣಿಕ, ಆರ್ಥಿಕ ಅಭಿವೃದ್ದಿಗೆ ಒತ್ತು, ಅನಾಥ ಮಕ್ಕಳಿಗೆ ಸಹಾಯಧನ, ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿ, ಮಹಿಳೆಯರಿಗೆ ಸ್ವಯಂ ರಕ್ಷಣೆ ಕುರಿತು ಕಾರ್ಯಾಗಾರ, ಸರ್ಕಾರದಿಂದ ಮಹಿಳೆಯರಿಗೆ ದೊರೆಯವ ಸಲವತ್ತುಗಳ ಬಗ್ಗೆ ಅರಿವು ಹಾಗೂ ಫಲಾನುಭವಿಗಳಾನ್ನಾಗಿ ಮಾಡುವುದು. ಅರಣ್ಯದಂಚಿನ ಗ್ರಾಮಗಳು, ಪೋಡು ಹಾಗೂ ಗಿರಿಜನ ಕಾಲೋನಿಯಲ್ಲಿರುವ ಮಹಿಳೆಯರಿಗೆ ಸವಲತ್ತು ತಲುಪಿಸುವ ಜೊತೆಗೆ ಅವರ ಜೀವನ ಶೈಲಗಳ ಬಗ್ಗೆ ಜಾಗೃತಿ ಮೂಡಿಸಲು ಇನ್ನರ್‌ವೀಲ್ ಸಂಸ್ಥೆಯಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಪೂಜಾ ಸುಭಾಶ್ ತಿಳಿಸಿದರು.

ಡಿವೈಎಸ್ಪಿ ಪ್ರಿಯಾದರ್ಶಿನಿ ಸಾಣೆಗೊಪ್ಪ ಅವರನ್ನು ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿನಿಗೆ ನೋಟ್‌ಬುಕ್, ಬ್ಯಾಗ್ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಸದಸ್ಯರಿಗೆ ಪರಿಸರ ರಕ್ಷಣೆ ಅಂಗವಾಗಿ ಗಿಡಗಳನ್ನು ನೀಡಲಾಯಿತು. ಇನ್ನರ್ ವೀಲ್ ಕಾರ್ಯದರ್ಶಿ ಚಿತ್ರಾ ಸುರೇಶ್, ಉಪಾಧ್ಯಕ್ಷೆ ನಂದಿನಿ ಸುಮನ್, ಖಜಾಂಚಿ ವೀಣಾ, ನಂದಿನಿ ನಾಗೇಂದ್ರ, ನೇತ್ರಾ ವಿಶ್ವಾಸ್, ನಾಗಶ್ರೀ, ಲಕ್ಷ್ಮೀ ವಿಶ್ವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net