ರಥೋತ್ಸವಕ್ಕೆ ಹಾಕಿದ್ದ ಮರಳು ತೆರವು ಆರಂಭ

050
Published on

ಚಾಮರಾಜನಗರ: ಶ್ರೀ ಚಾಮರಾಜೇಶ್ವರ ರಥೋತ್ಸವ ಸುಗಮ ರೀತಿಯಲ್ಲಿ ಸಾಗಲು ರಥದ ಬೀದಿಯಲ್ಲಿ ಹಾಕಿದ್ದ ಮರಳು ತೆರವು ಕಾರ್ಯ ಆರಂಭವಾಗಿದೆ.
ನಗರದ ರಥದ ಬೀದಿಯಲ್ಲಿ ಬುಧವಾರ ಮರಳು ತೆರವು ಕಾರ್ಯವನ್ನು ನಗರಸಭೆಯ ಪೌರಕಾರ್ಮಿಕರು ಶುರು ಮಾಡಿದರು. ದೇಗುಲದ ಪಕ್ಕದ ರಥದ ಬೀದಿಯಲ್ಲಿ ಅರ್ಧ ದಾರಿಯವರೆಗೆ ಮರಳನ್ನು ತೆರವುಗೊಳಿಸಿದರು.

ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ, ದೊಡ್ಡ ಗಣಪತಿ ಕೂರಿಸುವ ರಸ್ತೆ, ಎಸ್‌ಬಿಐ ಬ್ಯಾಂಕ್, ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನ, ಮಾರುಗುಡಿ ರಸ್ತೆ, ಮಾರುಕಟ್ಟೆ ರಸ್ತೆಯಲ್ಲಿ ರಥೋತ್ಸವದ ವೇಳೆ ರಥ ಸರಾಗವಾಗಿ ಸಾಗಲು ಹಾಗೂ ರಥಕ್ಕೆ ಬಾಳೆಹಣ್ಣು ಎಸೆದಾಗ ಜನರು ಜಾರಿ ಬೀಳದಿರುವ ಉದ್ದೇಶದಿಂದ ಮರಳನ್ನು ಹರಡಿದ್ದರು.

ರಥೋತ್ಸವ ಮುಗಿದು ತುಂಬಾ ದಿನಗಳಾಗಿದ್ದರು, ರಸ್ತೆಯಲ್ಲಿರುವ ಮರಳನ್ನು ತೆರವುಗೊಳಿಸದೆ ವಾಹನ ಸವಾರರಿಗೆ, ರಥದ ಬೀದಿಯಲ್ಲಿರುವ ಅಂಗಡಿ ಮಾಲೀಕರಿಗೆ ಹಾಗೂ ಪಾದಚಾರಿಗಳಿಗೆ ತುಂಬಾ ಸಮಸ್ಯೆ ಉಂಟಾಗಿತ್ತು. ನಗರಸಭೆ ಅಧಿಕಾರಿಗಳು ತಡವಾದರೂ ಎಚ್ಚೆತ್ತುಕೊಂಡು, ಮರಳು ತೆರವಿಗೊಳಿಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net