ರೈತರ ಆರ್ಥಿಕ ಆದಾಯಕ್ಕೆ ಸಹಕಾರಿ

23chn3
Published on

 ಚಾಮರಾಜನಗರ:ಕೃಷಿ ಪೂರಕವಾದ ಚಟುವಟಿಕೆಗಳು ರೈತರ ಆರ್ಥಿಕ ಆದಾಯಕ್ಕೆ ಸಹಕಾರಿ  ಎಂದು ಕೃಷಿ ಮಹಾ ವಿದ್ಯಾಲಯದ ವಿಶೇಷಾಧಿಕಾರಿ  ಡಾ. ಸಿ.ದೊರೆಸ್ವಾಮಿ ಹೇಳಿದರು.

ತಾಲೂಕಿನ ಹರದನಹಳ್ಳಿ ಸಮೀಪದ  ಕೃಷಿ ವಿಜ್ಞಾನ ಕೇಂದ್ರದಲ್ಲಿ  ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ಹಸು ಸಾಕಾಣಿಕೆ, ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಕುರಿತ ಎರಡು ದಿನಗಳ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಗೆ ಪಶುಸಂಗೋಪನೆ  ಆಧಾರ ಸ್ತಂಭವಾಗಿದ್ದು ಸ್ಥಳೀಯ ಸಂಪನ್ಮೂಲಗಳ ಬಳಕೆಗೆ ಆದ್ಯತೆ ನೀಡಿ,  ಸಾವಯವ ಗೊಬ್ಬರವನ್ನು ಬಳಸಲು ಸಾಧ್ಯವಾಗಲಿದೆ. ಬೆಳೆಗಳ ಬೆಳವಣಿಗೆ ಮತ್ತು ಇಳುವರಿ ಕಾಯ್ದುಕೊಳ್ಳಲು ಉಪಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪಶು ಸಂಗೋಪನೆಯಿಂದ ಕೃಷಿಯಲ್ಲಿ ಬೆಳೆ ನಿರ್ವಹಣಾ ಚಟುವಟಿಕೆಗಳಿಗೆ ಪರಿಸರ ಪೂರಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು ಎಂದರು. 

ವೆಂಕಟಯ್ಯನ ಛತ್ರ ಪಶು ವೈದ್ಯಾಧಿಕಾರಿ  ಡಾ. ನಾಗೇಂದ್ರ ಸ್ವಾಮಿ ಮಾತನಾಡಿ, ರೈತರು  ವೈಜ್ಞಾನಿಕವಾಗಿ ಹಸು ಕರುಗಳನ್ನು ಸಾಕಿ, ನಿರ್ವಹಿಸಿ ಅವುಗಳ ಪೌಷ್ಟಿಕತೆಗೆ ಆದ್ಯತೆ ನೀಡಿ ಸಮತೋಲನ ಆಹಾರ ಒದಗಿಸಿ ಎಂದು ತಿಳಿಸಿದರು. 

ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಮೋಹನ್ ಕುಮಾರ್ ಮಾತನಾಡಿ, ಸಮಗ್ರ ಕೃಷಿ ಪದ್ಧತಿ ಒಂದು ಉತ್ತಮವಾದ ಕೃಷಿ ಪದ್ಧತಿಯಾಗಿದ್ದು, ಬೆಳೆ ಪಶು ಸಂಗೋಪನೆ, ಕೃಷಿ-ಅರಣ್ಯ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕೃಷಿಯ ಸಾಮರ್ಥ್ಯ ಹೆಚ್ಚಿಸುವುದು, ಕೃಷಿ ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಎಂದು ಹೇಳಿದರು. ಡಾ. ಮನೋಹರ್, ಹವಾಮಾನ ತಜ್ಞ ರಜತ್ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net