ಚಾಮರಾಜನಗರ: ತೋಟಗಾರಿಕೆ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮ ಹನಿ ನೀರಾವರಿ (ಪಿಎಂಕೆಎಸ್‌ವೈ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಉಪಕರಣ ಅಳವಡಿಕೆಗೆ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 90ರಷ್ಟು ಸಹಾಯಧನವನ್ನು ನಿಗದಿಪಡಿಸಲಾಗಿದೆ.
ಈಗಾಗಲೇ ಈ ಯೋಜನೆಯಡಿ ಸಹಾಯಧನ ಪಡೆದು 7 ವರ್ಷ ಪೂರ್ಣಗೊಂಡಿದ್ದಲ್ಲಿ ಎರಡನೇ ಬಾರಿ ಅದೇ ಫಲಾನುಭವಿಗಳು ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಲ್ಲಿ ಸಹಾಯಧನ ನೀಡಲಾಗುತ್ತದೆ. ಆಸಕ್ತ ರೈತರು ಅಗತ್ಯ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಕಾರ್ಯದೇಶ ಪಡೆದು ತೋಟಗಾರಿಕೆ ಇಲಾಖೆ ಅನುಮೋದಿತ ಡ್ರಿಪ್ ಕಂಪನಿ, ಸಂಸ್ಥೆಗಳಿಂದ ಐಎಸ್‌ಐ ಗುಣಮಟ್ಟದ ಹನಿ ನೀರಾವರಿ ಉಪಕರಣ ಅಳವಡಿಸಿಕೊಂಡು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.