ಅಭಿವೃದ್ಧಿ ಕಾಳಜಿ ಇದ್ದರೆ ಕ್ಷೇತ್ರ ಬಿಟ್ಟುಕೊಡಲಿ ಎಚ್ಡಿಕೆಗೆ , ಚಲುವರಾಯಸ್ವಾಮಿ ಸವಾಲ್

img_2607-1.jpg
Published on

ರಾಮನಗರ: ನಿಜವಾಗಲೂ ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಕ್ಷೇತ್ರವನ್ನು ಬಿಟ್ಟುಕೊಡಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕೆಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸವಾಲೆಸದರು.

ರಾಮನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ. ಹಿಂದೆ ತಮಿಳುನಾಡಿನಲ್ಲಿ ಜಯಲಲಿತಾ 17-18 ಉಪ ಚುನಾವಣೆಗಳನ್ನು ಅಭಿವೃದ್ಧಿ ಕಾರಣದಿಂದಲೇ ಬಿಟ್ಟುಕೊಟ್ಟ ಮೇಲೆ ಕುಮಾರಸ್ವಾಮಿ ಅವರು ಬಿಟ್ಟುಕೊಡಲಿ ಎಂದರು.

ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾರೆ. ಚನ್ನಪಟ್ಟಣದಿಂದ ಅಲ್ಲ. ಆದರೆ ಚನ್ನಪಟ್ಟಣ ಎರಡು ಬಾರಿ ಚನ್ನಪಟ್ಟಣದಿಂದ ಗೆಲ್ಲಿಸಿದ್ದಾರೆ. ಅವರು ಏನು ಮಾಡಿದರು. ಅವರ ಅಭಿವೃದ್ಧಿ ಮಂಡ್ಯಕ್ಕೆ ಹೋದರೆ, ಚನ್ನಪಟ್ಟಣ ಅಭಿವೃದ್ಧಿಗೆ ನಾವು ಏಕೆ ಯೋಗೇಶ್ವರ್ ಗೆ ಮತ ಹಾಕಬಾರದು ಎಂದು ಮತದಾರರು ಯೋಚನೆ ಮಾಡಿದ್ದಾರೆ.

ಯೋಗೇಶ್ವರ್ ಕೈಗೆ ಸಿಗುವ ವ್ಯಕ್ತಿ, ಕುಮಾರಸ್ವಾಮಿ ಎರಡು ಬಾರಿ ಗೆದ್ದು ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ, ಜನರಿಗೆ ಸ್ಪಂದಿಸಲಿಲ್ಲ ಎಂದು ಟೀಕಿಸಿದರು.

ದೇವೇಗೌಡರು ದೊಡ್ಡವರು ಅವರು ಯಾರಿಗೆ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು , ಸಿದ್ದರಾಮಯ್ಯ ಅವರು ಒಟ್ಟಿಗೆ ರಾಜಕಾರಣ ಮಾಡಿದವರು. ಯಾರೂ ಎಷ್ಟು ಮಾತನಡಬೇಕೋ ಅಷ್ಟು ಮಾತನಾಡಬೇಕು ಅಂಕೆ ಮೀರಿದರೆ ಡ್ಯಾಮೇಜ್ ಆಗುತ್ತದೆ.

ನನಗೆ ದೇವೇಗೌಡರ ಬಗ್ಗೆ ಗೌರವ ಇದೆ. ರಾಜಕೀಯವೆ ಬೇರೆ ಗೌರವೆವೇ ಬೇರೆ ಎಂದರು.

ಎಂಎಲ್ ಸಿ ಪುಟ್ಟಣ್ಣ, ಬೆಂಗಳೂರೂ ಡಿಸಿಸಿ ಅಧ್ಯಕ್ಷ ಹನುಮಂತರಾಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net