

ಸಕಲೇಶಪುರ: ಭಕ್ತಿಯ ಕುರುಹಾಗಿ ಬಳಸುತ್ತಿದ್ದ ವಿಭೂತಿ ಈಗ ಕರೊನಾ ನಿಯಂತ್ರಣಕ್ಕೂ ಮದ್ದು!
ಹೌದು, ಇಂತಹದ್ದೊಂದು ಸುದ್ದಿ ಮಲೆನಾಡಿನಲ್ಲಿ ಚಾಲ್ತಿಯಲ್ಲಿದ್ದು, ಅಕ್ಷರಶಃ ಕರೊನಾ ಸೋಂಕು ತಡೆಗಟ್ಟುವ ಸಾಧನವಾಗಿ ವಿಭೂತಿ ಬಳಕೆಯಾಗುತ್ತಿದೆ. ಯಾವುದೇ ಸೋಂಕು ತಡೆಯುವ ಶಕ್ತಿಯನ್ನು ಭಸ್ಮ ಹೊಂದಿರುವ ಬಗ್ಗೆ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಕರೊನಾ ಸೋಂಕನ್ನೂ ತಡೆಯುತ್ತದೆ ಎಂಬ ನಂಬಿಕೆಯಿಂದ ಮಲೆನಾಡ ಜನರು ಜಾತಿ, ಮತ ಬಿಟ್ಟು ಭಸ್ಮ ಬಳಸಲು ಶುರು ಮಾಡಿದ್ದಾರೆ. ಇದನ್ನೂ ಓದಿರಿ video/ ಬೆಂಗಳೂರು ನಿವಾಸಿಗಳೇ ರಾತ್ರಿ ಹೊರ ಬರುವ ಮುನ್ನ ಎಚ್ಚರ! ಆ್ಯಕ್ಟೀವ್ ಆಗಿದೆ ರಾಬರಿ ಟೀಂ
ಹಣೆಗೆ ಮಾತ್ರವಲ್ಲದೆ ಬಟ್ಟೆಯಿಂದ ಮುಚ್ಚದ ದೇಹದ ಪ್ರತಿಯೊಂದು ಭಾಗಕ್ಕೂ ವಿಭೂತಿ ಬಳಿದುಕೊಳ್ಳುವ ಮೂಲಕ ರೋಗ ತಡೆಗೆ ಮುಂದಾಗಿದ್ದಾರೆ. ವಿಭೂತಿ ಬಳಿದ ಸ್ಥಳಕ್ಕೆ ಯಾವುದೇ ವೈರಾಣು ದಾಳಿ ಇಡುವುದಿಲ್ಲ, ಚರ್ಮರೋಗಕ್ಕೂ ವಿಭೂತಿ ಮದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ವಿಭೂತಿ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ.
ಭಸ್ಮ ಭಕ್ತಿಯ ಸಂಕೇತ. ಹಿಂದಿನ ಕಾಲದಿಂದಲೂ ಭಸ್ಮವನ್ನು ಒಂದು ಔಷಧವನ್ನಾಗಿ ಬಳಸುತ್ತಿದ್ದರು. ಆದ್ದರಿಂದಲೇ ವೀರಶೈವ ಪರಂಪರೆಯಲ್ಲಿ ಭಸ್ಮಕ್ಕೆ ಮೊದಲ ಪ್ರಾಶಸ್ತ್ಯವಿದೆ ಎಂದು ತೆಂಕಲಗೋಡು ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.