ರಕ್ಷಿತ್ ಶೆಟ್ಟಿ ಫೋಟೋ ಹಾಕಿ ಎಂದು ಫ್ಯಾನ್ಸ್ ನನ್ನ​ ಕೇಳುತ್ತಾರೆ: ನಟಿ ಚೈತ್ರಾ ಜೆ.ಆಚಾರ್​

Untitled design (25)
Published on

ಬೆಂಗಳೂರು: ವಿಜಯವಾಣಿ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ನಟಿ ಚೈತ್ರಾ ಜೆ.ಆಚಾರ್​, ರಕ್ಷಿತ್ ಶೆಟ್ಟಿ ಅವರ ಫೋಟೋ ಹಾಕಿ ಎಂದು ಫ್ಯಾನ್ಸ್ ನನ್ನ​ ಕೇಳುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

"'ಸಪ್ತಸಾಗರದಾಚೇ ಎಲ್ಲೋ' ಸಿನಿಮಾದ ಚಿತ್ರೀಕರಣದಲ್ಲಿ ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ನಟನೆ ಮಾಡವುದು ನನಗೆ ಬಹಳ ಸುಲಭವಾಯಿತು. ಸಿಂಪಲ್ ಸ್ಟಾರ್​​ ಜತೆ ಅಭಿನಯಿಸುವುದಕ್ಕೆ ನನಗಂತೂ ಬಹಳ ಖುಷಿ ನೀಡಿದೆ. ಅವರ ಇನ್ನೊಂದು ಮುಖವನ್ನು ಶೂಟಿಂಗ್​​ ಸೆಟ್​​ನಲ್ಲೇ ನೋಡಬೇಕೇ ಹೊರತು ಹೊರಗಡೆ ನೋಡಲು ಸಾಧ್ಯವಿಲ್ಲ. ನನಗೆ ಅಥವಾ ರುಕ್ಮಿಣಿ ವಸಂತ್ ಅವರಿಗೆ ರಕ್ಷಿತ್ ಸರ್​​ ಫೋಟೋ, ವಿಡಿಯೋಗಳನ್ನು ಹೆಚ್ಚಾಗಿ ಪೋಸ್ಟ್​ ಮಾಡಿ ಎಂದು ಅವರ ಫ್ಯಾನ್ಸ್​​ ಮೆಸೆಂಜ್​ ಮಾಡುತ್ತಾರೆ" ಎಂದು ಹೇಳಿದರು.

"ಚಿತ್ರದಲ್ಲಿ ನನ್ನ ಪಾತ್ರದ ಕುರಿತು ಸದ್ಯ ನಾನು ಏನೂ ಹೇಳಲು ಬಯಸುವುದಿಲ್ಲ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ನಿಮಗೆ ತಿಳಿಯಲಿದೆ" ಎಂದು ಹೇಳಿದರು. ಸಿನಿಮಾದ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ತಿಳಿಯಲು ಕೆಳಗೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net