ಚೈತನ್ಯಾನಂದ ಮೇಲಿದೆ ಐದು ಕ್ರಿಮಿನಲ್ ಕೇಸ್

5-68d57fa1d83c1
Published on

ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚೈತನ್ಯಾನಂದ ವಿರುದ್ಧ 5 ಕ್ರಿಮಿನಲ್ ಕೇಸ್​ಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಶ್ರೀ ಶಾರದಾ ಇನ್​ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್​ವೆುಂಟ್ ರಿಸರ್ಚ್​ನಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹೊರಬಂದ ಬಳಿಕ ಚೈತನ್ಯಾನಂದನ ವಿರುದ್ಧ 2009 ಮತ್ತು 2016 ರಲ್ಲೂ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ವಸಂತ ಕುಂಜ್ (ಉತ್ತರ) ಪೊಲೀಸ್ ಠಾಣೆಯಲ್ಲೇ 5 ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ.

ಚೈತನ್ಯಾನಂದ ತಾನು ಷಿ ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್​ನಿಂದ ಎಂಬಿಎ ಮತ್ತು ಪಿಚ್​ಡಿ ಪದವಿ ಪಡೆದಿರುವುದಾಗಿ ಹಾಗೂ ತಾನು ಪ್ರಸಿದ್ಧ ಲೇಖಕನಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚಿಗೆ ಪಡೆದಿರುವ ಬರಹಗಾರ ಹಾಗೂ 143 ಸಂಶೋಧನಾ ಪ್ರಬಂಧಗಳನ್ನು ಬರೆದಿರುವುದಾಗಿ ಪರಿಚಯಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net