

ನವದೆಹಲಿ: ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಮತ್ತು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರಿಗೆ ನೀಡಲಾಗಿದ್ದ ಸೆಕ್ಯುರಿಟಿ ಕವರ್ ಅನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪನ್ನೀರ ಸೆಲ್ವಂ ಅವರಿಗೆ ನೀಡಲಾಗಿದ್ದ ಸೆಂಟ್ರಲ್ ಪ್ಯಾರಾಮಿಲಿಟರಿ ಕಮಾಂಡೋಗಳಿರುವ "Y+" ಭದ್ರತೆಯನ್ನು ಮತ್ತು ಸ್ಟಾಲಿನ್ ಅವರಿಗೆ ನೀಡಲಾಗಿದ್ದ "Z+" ಭದ್ರತೆಯನ್ನು ಸರ್ಕಾರ ರದ್ದುಗೊಳಿಸಿದೆ.
ಅವರಿಗೆ ಇರುವ ಜೀವ ಬೆದರಿಕೆಯ ಅಂಶಗಳನ್ನು ವಿಶ್ಲೇಷಿಸಿದ ಬಳಿಕ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಈ ಇಬ್ಬರೂ ನಾಯಕರಿಗೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್) ಕಮಾಂಡೋಗಳ ಭದ್ರತೆ ಇರಲಿದೆ. ಇದು ರಾಜ್ಯ ಪೊಲೀಸ್ ಅಧೀನ ಇದ್ದು, ಅವರೇ ಇನ್ನು ಇವರ ಭದ್ರತೆಯ ಹೊಣೆಗಾರಿಕೆ ನೋಡಬೇಕಾಗಿದೆ. (ಏಜೆನ್ಸೀಸ್)