ಕೇಂದ್ರ ಸರ್ಕಾರವೇ ವಿತರಿಸಲಿದೆ ಕರೊನಾ ಲಸಿಕೆ; ಸಾರ್ವಜನಿಕರಿಗೆ ಬೇಕಿಲ್ಲ ಆತಂಕ

vaccine
Published on

ನವದೆಹಲಿ: ಕೋವಿಡ್​ ಕಾಯಿಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕರೊನಾ ಲಸಿಕೆ ಖರೀದಿ ಹಾಗೂ ವಿತರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಕರೊನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ. ಕರೊನಾ ಲಸಿಕೆ ವಿಚಾರವಾಗಿ ರಚಿಸಲಾಗಿರುವ ಕಾರ್ಯಪಡೆ ಈ ನಿರ್ಧಾರ ಕೈಗೊಂಡಿದೆ.

ಲಸಿಕೆ ವಿತರಣೆಯಲ್ಲಿ ಗೊಂದಲ ಉಂಟಾಗದಿರಲು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಲಸಿಕೆ ಸಂಗ್ರಹಕ್ಕೆ ಬೇರಾವ ಮಾರ್ಗಗಳನ್ನು ಕಂಡುಕೊಳ್ಳದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ಸೂಚಿಸಲಾಗಿದೆ. ರಾಜ್ಯ ನೀತಿ ಆಯೋಗದ ಡಾ. ವಿ.ಕೆ.ಪಾಲ್​ ನೇತೃತ್ವದಲ್ಲಿ ನಡೆದ ಟಾಕ್ಸ್​ಫೋರ್ಸ್​ ಸಭೆಯಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ.

ಈ ನಡುವೆ, ಭಾರತದ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ನ ಆರಂಭಿತ ಹಂತದ ಫಲಿತಾಂಶಗಳು ಗೊತತ್ಆಗಿದ್ದು, ಮಾನವರ ಬಳಕೆಗೆ ಸುರಕ್ಷಿತ ಎನಿಸಿವೆ. ಮುಂದಿನ ಹಂತದಲ್ಲಿ ಅದರ ಕ್ಷಮತೆ ಬಗ್ಗೆ ಪರೀಕ್ಷೆ ನಡೆಯಬೇಕಿದೆ. ಇದು ಆಶಾದಾಯಕ ಬೆಳವಣಿಗೆ ಎನಿಸಿದೆ.

ಇದಲ್ಲದೇ, ಕ್ಲಿನಿಕಲ್​ ಹಂತದಲ್ಲಿರುವ ಇತರ ಲಸಿಕೆಗಳ ಅಭಿವೃದ್ಧಿ ಹಂತಗಳ ಬಗ್ಗೆಯೂ ಸಮಿತಿ ನಿಗಾ ವಹಿಸಿದೆ. ಲಸಿಕೆಯನ್ನು ಯಾರಿಗೆ ಮೊದಲು ನೀಡಬೇಕು ಎಂಬುದನ್ನು ಈ ಸಮಿತಿಯೇ ನಿರ್ಧರಿಸಲಿದೆ.

ಸರ್ಕಾರವೇ ಔಷಧ ಕಂಪನಿಗಳಿಂದ ಲಸಿಕೆಯನ್ನು ಖರೀದಿಸಿ ಸಾರ್ವಜನಿಕರಿಗೆ ನೀಡಲಿದೆ ಎಂದು ಪುಣೆಯ ಸಿಎಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದಾರ್​ ಪೂನಾವಾಲಾ ಈ ಹಿಂದೆ ಸುಳಿವು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net