

ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು,
ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದ ರಾಜಕಾರಣಿಗಳನ್ನ ಇಕ್ಕಟ್ಟಿಗೆ ಸಿಲುಕಿಸಿ ರಾಜಕೀಯವಾಗಿ ಮುಗಿಸುವ ಸಂಚಿನ ಬಗ್ಗೆ ಸುಪ್ರೀಂ ಕೋರ್ಟ್ ತಿಳಿಸಿರುವುದು ಗಂಭೀರವಾದ ಅಂಶ ಎಂದರು.
ಈ ತನಕ ಸುಮಾರು 193 ಕೇಸ್‌ಗಳನ್ನ ಈ ರಾಜಕಾರಣಿಗಳ ಮೇಲೆ ಹಾಕಲಾಗಿದೆ. ಸತ್ಯಂ ಕಂಪ್ಯೂಟರ್, ರೋಸ್ ವ್ಯಾಲಿ ಬಿಟ್ಟರೆ ಯಾವುದೂ ಶಿಕ್ಷೆಯಾದ ಬಗ್ಗೆ ಉದಾಹರಣೆಗಳಿಲ್ಲ ಎಂದರು.
ಮುಡಾದಲ್ಲಿ 14 ಸೈಟ್ ಸರೆಂಡರ್ ಮಾಡಿದ ಮೇಲೆ ಮನಿ ಲಾಂಡ್ರಿಂಗ್ ಕೇಸ್ ಉದ್ಭವಿಸೋದೇ ಇಲ್ಲ. ಈಗ ಇಡಿಗೆ ಸುಪ್ರೀಂ ಕೋರ್ಟ್ ಕಪಾಳ ಮೋಕ್ಷ ಮಾಡಿದೆ ಎಂದರು.
ಈ ಪ್ರಕರಣದಲ್ಲಿ ವಿಶೇಷವಾಗಿ ವಿತ್ತ ಸಚಿವರು ಈ ದೇಶದ ಜನರ ಕ್ಷಮೆ ಕೇಳ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ಇನ್ನೂ ಕ್ಷಮೆ ಕೇಳಿಲ್ಲ ಎಂದರು.
ರಾಜ್ಯದಲ್ಲಿ ಡಿಕೆ ಶಿವಕುಮಾರ್ ಮೇಲೆ ಹಾಕಿರು ಕೇಸ್‌ಗಳನ್ನು ಕೇಂದ್ರ ಸರ್ಕಾರ ವಾಪಸ್ ತಗೋಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
*ಕೇಂದ್ರ ಹಣಕಾಸು ಸಚಿವರು ವ್ಯಾಪಾರಿಗಳ ಸಮಸ್ಯೆ ಆಲಿಸಬೇಕು. ನೋಟೀಸ್ ನೀಡುವ ಮೂಲಕ ಕೇಂದ್ರ ಸರ್ಕಾರ ಸಣ್ಣ ವ್ಯಾಪಾರಿಗಳ ಮೇಲೆ ಮಾಡಿರುವ ಅತ್ಯಾಚಾರ ಎಂದು ಭಾವಿಸಬೇಕಾಗಿದೆ. ಈ ಸಮಸ್ಯೆಯನ್ನ ಕೇಂದ್ರ ಕೂಡಲೇ ಪರಿಹಾರ ಮಾಡಬೇಕು. ಜಿಎಸ್‌ಟಿ ಕೇಂದ್ರದ ಅಡಿಯಲ್ಲಿ ಬರುತ್ತದೆ ಎಂದು ಸಿಟಿ ರವಿಯವರಿಗೆ ಗೊತ್ತಿರಬೇಕು.
-ಪ್ರಕಾಶ್ ರಾಥೋಡ್, ಮಾಜಿ ವಿಧಾನ ಪರಿಷತ್ ಸದಸ್ಯ