ಗ್ರಾ.ಪಂ.ಗಳಿಗೆ ಕೇಂದ್ರ ಸರ್ಕಾರದ ಬಲ: 448.29 ಕೋ.ರೂ. ಬಿಡುಗಡೆ

15th finance
Published on

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಮೊದಲ ಕಂತು 448.29 ಕೋಟಿ ರೂ.ಗಳನ್ನು ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ರಾಜ್ಯದ ಅರ್ಹ ಎಲ್ಲ 5,949 ಗ್ರಾ.ಪಂ.ಗಳಿಗೆ ಈ ನೆರವು ಹಂಚಿಕೆಯಾಗಲಿದೆ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗಾಗಿ ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಅನುದಾನವನ್ನು ಬಿಡುಗಡೆ ಮಾಡಲು ಪಂಚಾಯತ್‌ರಾಜ್ ಮತ್ತು ಜಲಶಕ್ತಿ ಸಚಿವಾಲಯ (ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ) ಶಿಾರಸು ಮಾಡುತ್ತದೆ.

ನಂತರ ಅದನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡುತ್ತದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾದ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲಿ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ವೇತನ ಹಾಗೂ ಇತರ ವೆಚ್ಚಗಳನ್ನು ಹೊರತುಪಡಿಸಿ, ನೈರ್ಮಲ್ಯ, ಬಯಲು ಮಲವಿಸರ್ಜನೆ ಮುಕ್ತ ಪರಿಸ್ಥಿತಿ, ಮನೆ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಮಳೆ ನೀರು ಕೊಯ್ಲು, ನೀರಿನ ಮರು ಬಳಕೆ ಕೆಲಸಗಳಿಗೆ ಈ ಅನುದಾನವನ್ನು ಗ್ರಾ.ಪಂ.ಗಳು ಬಳಸಿಕೊಳ್ಳುತ್ತವೆ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಧಿಯು ಸ್ಥಳೀಯ ಆಡಳಿತ ಮಂಡಳಿಗಳು ಹೆಚ್ಚು ಪರಿಣಾಮಕಾರಿ, ಜವಾಬ್ದಾರಿಯುತ, ಸ್ವತಂತ್ರವಾಗಲು ಸಹಾಯ ಹಾಗೂ ಸುಸ್ಥಿರ, ಶಾಶ್ವತ ಪ್ರಗತಿಗೆ ಕಾರಣವಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net